ಪುತ್ತೂರು: ಉರ್ಲಾಂಡಿ ಶ್ರೀಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ 53ನೇ ವರ್ಷದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮಾ.30ರಂದು ನಡೆಯಲಿದೆ.
ಬೆಳಿಗ್ಗೆ 7.30ರಿಂದ ಸ್ಥಳ ಶುದ್ಧಿ, ಗಣಪತಿ ಹೋಮ, ಅಶ್ವತ್ಥ ಪೂಜೆ, ಸಂಜೆ ಕಲಶ ಪ್ರತಿಷ್ಠೆ, ರಾತ್ರಿ ಸರಸ್ವತಿ ಭಜನಾ ಮಂದಿರದ ಸದಸ್ಯರಿಂದ ಭಜನೆ, 7.30ಕ್ಕೆ ಕಥಾ ಪ್ರವಚನ, 8.30ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.