ಪುತ್ತೂರು: ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಅಸ್ಪತ್ರೆಯಲ್ಲಿ ದಾಖಲಾಗಿರುವ ಹಲ್ಲೆಗೊಳಗಾದ ವ್ಯಕ್ತಿಯ ದೂರಿನಂತೆ ಇನ್ನೊಂದು ಪ್ರಕರಣ ದಾಖಲಾಗಿದೆ.
ಕುರಿಯ ಗ್ರಾಮದ ಸಂಪ್ಯದಮೂಲೆ ನಿವಾಸಿ ಹಸೈನಾರ್(62 ವ)ರವರು ಹಲ್ಲೆಗೊಳಗಾಗಿದ್ದು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಸೈನಾರ್ ಅವರು ತನ್ನ ಸಹೋದರ ಇಬ್ರಾಹಿಂ ರವರ ಹೆಸರಿನಲ್ಲಿರುವ ಜಮೀನಿನ ಹತ್ತಿರ ಹೋಗಿರುವ ಸಮಯ ಜಮೀನಿನ ಆಸುಪಾಸಿನಲ್ಲಿ ವಾಸವಾಗಿರುವ ರೇಖನಾಥ ರೈ ಎಂಬುವವರ ಅಕ್ಕ ಪುಷ್ಪಾವತಿ, ಬಾವ ಜೀವನ್, ಅಣ್ಣ ನಾರಾಯಣ ರೈ ರವರುಗಳು ಆ ಸ್ಥಳಕ್ಕೆ ಬಂದು ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ರೇಖಾನಾಥ ರೈ ರವರು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ಹೈಸನಾರ್ ಅವರು ಚಿಕಿತ್ಸೆ ಬಗ್ಗೆ ಆಟೋರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಾಗ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದಂತೆ ಅವರು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
