ಉಪ್ಪಿನಂಗಡಿ: ಪುತ್ತೂರಿನ ಭವಾನಿ ಶಂಕರ ದೇವಸ್ಥಾನ ರಸ್ತೆಯ ಚೇತನಾ ಆಸ್ಪತ್ರೆಯ ಪಕ್ಕದ ಕಟ್ಟಡದ ಒಂದನೇ ಮಹಡಿಯಲ್ಲಿ ಕೆ. ಸಾತ್ವಿಕ್ ಪಡಿಯಾರ್ ಅವರ ಸರ್ಗಮ್ ಕೀಬೋರ್ಡ್ ಅಕಾಡಮಿ ಮಾ.30ರಂದು ಶುಭಾರಂಭಗೊಳ್ಳಲಿದೆ.

ಚೆನ್ನೈಯಲ್ಲಿರುವ ಎ.ಆರ್. ರಹ್ಮಾನ್ ರವರ ಕೆ.ಎಂ. ಕಾಲೇಜ್ ಆಫ್ ಮ್ಯೂಸಿಕ್ ಆಂಡ್ ಟೆಕ್ನಾಲಜಿಯಲ್ಲಿ ಆಡಿಯೋ ಎಂಜಿನಿಯರಿಂಗ್ ಮತ್ತು ವೆಸ್ಟ್‌ರ್ನ್ ಪಿಯಾನೋ ಕಲಿತಿರುವ ಕೆ. ಸಾತ್ವಿಕ್ ಪಡಿಯಾರ್ ಅವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ, ಸೈಂಟ್ ಮೇರಿಸ್, ಮಾಣಿ ಬಾಲವಿಕಾಸ ಶಾಲೆಗಳಲ್ಲಿ ಎರಡು ವರ್ಷಗಳಿಂದ ಕೀಬೋರ್ಡ್ ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.