ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಹದೇವ ಇ ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
1986 ಜು.18ರಂದು ಕೆಥೋಲಿಕ್ ಅನುದಾನಿತ ವಿದ್ಯಾ ಸಂಸ್ಥೆ ಕ್ರಿಸ್ತಜ್ಯೋತಿ ಪ್ರೌಢಶಾಲೆ ಅಗ್ರಾರ ಇಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಆದರ್ಶ ಪ್ರೌಢ ಶಾಲೆ ತಾಕೋಡೆ ಮೂಡಬಿದ್ರೆ ಹಾಗೂ ನಂತರ 1997ರಲ್ಲಿ ಸರಕಾರಿ ಸೇವೆಗೆ ಸೇರಿ 2003ರವರೆಗೆ ಬಂಟ್ವಾಳ ತಾಲೂಕಿನ ಕೊಯಿಲ ಪ್ರೌಢ ಶಾಲೆಯಲ್ಲಿ, ನಂತರ 2013 ರಿಂದ 2015ರ ಕಬಕ ವರೆಗೆ ಸರಕಾರಿ ಪ್ರೌಢಶಾಲೆಯಲ್ಲಿ, 2015 ರಿಂದ 2019 ರವರೆಗೆ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ 2019 ರಿಂದ ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ.
ಸಹದೇವ ಇ ಅವರು ಪತ್ನಿ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಾಯತ್ರಿ, ಎಸ್ಡಿಎಂ ಧಾರವಾಡ ಇಲ್ಲಿ ಎಂಡಿಎಸ್ ಓರಲ್ ಸರ್ಜರಿ ಅಭ್ಯಾಸ ನಡೆಸುತ್ತಿರುವ ಪುತ್ರ ಡಾಟ ಸಾಗರ್ ಏರಾಜೆ ಜೊತೆ ಮುಕ್ರಂಪಾಡಿ ಮಿಷನ್ಮೂಲೆ ಎಂಬಲ್ಲಿ ವಾಸ್ತವ್ಯ ಹೊಂದಿದ್ದಾರೆ.