ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಪೆರ್ಲಂಪಾಡಿ ಇದರ ವತಿಯಿಂದ ಮಾಲೆತ್ತೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ‘ಕಲಿಕಾ ಚೈತನ್ಯ-2025’ ಇದರ ಉದ್ಘಾಟನಾ ಸಮಾರಂಭ ಎ.1 ರಂದು ಮಾಲೆತ್ತೋಡಿ ಶಾಲೆಯಲ್ಲಿ ನಡೆಯಲಿದೆ.
ಶಿಬಿರವು ಎ.1 ರಿಂದ 5 ರ ತನಕ ನಡೆಯಲಿದೆ. ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ವೆಂಕಪ್ಪ ನಾಯ್ಕ ಕಣ್ಣಕಜೆ ಅಧ್ಯಕ್ಷತೆ ವಹಿಸಲಿದ್ದು ಮಾಲೆತ್ತೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಪದ್ಮಪ್ರಸಾದ್ ರೈ ಶಿಬಿರ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಮುಖ್ಯಗುರು ವೀರಪ್ಪ ಗೌಡ ದುಗ್ಗಳ, ಮಾಲೆತ್ತೋಡಿ ಶಾಲಾ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿ,ಕೊಳ್ತಿಗೆ ಗ್ರಾಪಂ ಸದಸ್ಯೆ ನಾಗವೇಣಿ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಎಂ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಜೀವನದ ಮೌಲ್ಯಗಳು, ಡ್ರಾಯಿಂಗ್, ಸಂಸ್ಕಾರ ತರಬೇತಿ, ಔಷಧೀಯ ಸಸ್ಯಗಳು ಮನೆಮದ್ದು ಮತ್ತು ಅಡುಗೆ ಕರಕುಶಲ ಕಲೆ, ಡ್ರಾಯಿಂಗ್ ಜೀವಜಗತ್ತಿನ ವಿಸ್ಮಯಗಳು, ಹಾವು ಮತ್ತು ನಾವು, ರಂಗ ತರಬೇತು ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತು ನೀಡಲಿದ್ದಾರೆ. ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲಾ ಮುಖ್ಯಗುರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಹಿರಿಯ ವಿದ್ಯಾರ್ಥಿ ಸಂಘ, ಪೋಷಕ ವೃಂದ, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಸದಸ್ಯರುಗಳ ಪ್ರಕಟಣೆ ತಿಳಿಸಿದೆ.