ಪುತ್ತೂರು: ಮಂಜಲ್ಪಡ್ಪು ಬಿಇಎಂ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಾಂಡ್ರ ಪುಷ್ಪಲತಾರವರಿಗೆ ಬೀಳ್ಕೊಡುಗೆ ಸಮಾರಂಭವು ಮಾ.31ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಿವೃತ್ತರನ್ನು ಸನ್ಮಾನಿಸಿದ ಮಂಗಳೂರು ಬಲ್ಮಠದ ಸಿಎಸ್‌ಐ ಕಚೇರಿಯ ರೈಟ್ ರೆವರೆಂಡ್ ಹೇಮಚಂದ್ರ ಬಿಹೋಪ್ ಮಾತನಾಡಿ, ಶಿಕ್ಷಕರು ತಾನು ಸಮಾಜದಿಂದ ಸಂಪಾದಿಸಿದ ಜ್ಞಾನದ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಜೀವನದಲ್ಲಿ ಸಾರ್ಥಕ ಕಾಣುವವರು. ವೃತ್ತಿ ಹಾಗೂ ನಿವೃತ್ತಿ ಜೀವನ ಭಾಗ. ನಮ್ಮ ಸಂಸ್ಥೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕಿ ಸಾಂಡ್ರ ಪುಷ್ಪಲತಾರವರು ಸೇವಾ ಮನೋಭಾದಿಂದ ಅರ್ಪಿಸಿಕೊಂಡವರು. ಸಮರ್ಪನಾ ಮನೋಭಾವದಿಂದ ಸಂಸ್ಥೆ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದವರು ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಮುರ, ಸಾಂಡ್ರ ಪುಷ್ಪಲತಾರವರು ಶಿಕ್ಷಕರಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಪ್ರಯತ್ನಿಸಿದವರು ಎಂದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಸಾಂಡ್ರ ಪುಷ್ಪಲತಾ ಮಾತನಾಡಿ, ತನ್ನ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡ ಅವರು ವೃತಿಯಲ್ಲಿ ಸಹಕರಿಸಿದವರಿಗೆ ಕೃತಜ್ಷತೆ ಸಲ್ಲಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂರ್ಣೇಶ್ ಕುಮಾರ್, ಸಿಎಸ್‌ಐ ವಾರ್ಡನ್ ಚಂದ್ರಶೇಖರ ಮೂರ್ತಿ, ನಿವೃತ್ತ ಮುಖ್ಯ ಗುರುಗಳಾದ ಮನೋಹರ್ ಕುಮಾರ್, ಪ್ರೇಮ ಕುಮಾರಿ, ನಿವೃತ್ತ ಶಿಕ್ಷಕಿ ಕುಶಲಾವತಿ ಮಾತನಾಡಿ ನಿವೃತ್ತರ ಬಗ್ಗೆ ಅನಿಸಿಕೆಗಳನ್ನು ಹೇಳಿದರು.
ಶಾಲಾ ಸಂಚಾಲಕ ಶಶಿಪಾಲ್ ಶೆಟ್ಟಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕಾವ್ಯ ಅಭಿನಂದನಾ ಪತ್ರ ವಾಚಿಸಿದರು. ಭಾರತಿ ಪಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.
ಸಹಶಿಕ್ಷಕಿ ಐರಿಸ್ ವಿಕ್ಟೋ, ರಿಯಾ, ಪ್ರವೀಣ ಗ್ರೇಸ್ ಹನ್ಸ್, ಗೌರವ ಶಿಕ್ಷಕಿಯರಾದ ರೂಪಾ, ಕವಿತಾ, ನಿವೃತ್ತ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅಡುಗೆ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.