ಪುತ್ತೂರು: ಫೊಟೋ, ವಿಡಿಯೋ, ಫೊಟೋ ಪ್ರಿಂಟ್, ಫ್ರೇಮ್ ವರ್ಕ್‌ಗಳ ಮಳಿಗೆ ಛಾಯಾಕುಟೀರ ದಿ ರಾಯಲ್ ಸ್ಟುಡಿಯೋ ಮಾ.31ರಂದು ಬೊಳುವಾರು ಸೂರ್ಯಪ್ರಭ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಸ್ಟುಡಿಯೋವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮಾತನಾಡಿ, ಆಧುನಿಕತೆಯೊಂದೊಗೆ ಪ್ರಾರಂಭಗೊಂಡಿರುವ ಸ್ಟುಡಿಯೋ ಜನರ ಅಪೇಕ್ಷೆಯಂತೆ ಸೇವೆ ನೀಡುವಂತಾಗಲಿ. ಉತ್ತಮ ಸೇವೆಯ ಮೂಲಕ ಸಂಸ್ಥೆ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.

ಕಾವೇರಿ ಅಮ್ಮ ರಾಯರಮನೆ, ಮುರಳೀಧರ ರಾಯರಮನೆ, ಪ್ರಿಯಮುರಳಿ, ಪ್ರಸೀದ, ಸಂಪನ್ನ, ಪ್ರಣೀತ, ರಾಜಾರಾಮ, ಮಧುಕರ, ಪ್ರಧ್ಯುಮ್ನ ಉಪಸ್ಥಿತರಿದ್ದರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಸಹಕರಿಸಿದರು.
ಶುಭಾರಂಭದ ಪ್ರಯುಕ್ತ ಆಫರ್…!
ಸ್ಟುಡಿಯೋದ ಶುಭಾರಂಭದ ಕೊಡುಗೆಯಾಗಿ ಫ್ಯಾಮಿಲಿ ಫೊಟೋ ಶೂಟ್, ಪ್ರಿಂಟ್ ಮತ್ತು ಫ್ರೇಮ್ ಕೇವಲ ರೂ.1000ಕ್ಕೆ ಮಾಡಿಕೊಡಲಾಗುವುದು. ಹಾಗೂ ಸ್ಟುಡಿಯೋ ಫೊಟೋ ಶೂಟ್‌ಗೆ ಶೇ.50 ಡಿಸ್ಕೌಂಟ್ ಏ.30ರ ವರೆಗೆ ನೀಡಲಾಗುವುದು. ಸುಮಾರು ಹಲವಾರು ವಿನ್ಯಾಸದ ಫೊಟೋ ಫ್ರೇಮ್‌ಗಳು ಲಭ್ಯವಿದೆ ಎಂದು ಮ್ಹಾಲಕರು ತಿಳಿಸಿದ್ದಾರೆ.