ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಜಾತ್ರೋತ್ಸವದ ಗೊನೆ ಕಡಿಯುವುದು, ಮಧ್ಯಾಹ್ನ ಅನ್ನಸಂತರ್ಪಣೆ
ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಕ್ಲಬ್ ಯುವ, ಜೆಸಿಐ ಪುತ್ತೂರು, ಮಲ್ಪೆಯ ಮಧ್ವರಾಜ್ ಟ್ರಸ್ಟ್ ವತಿಯಿಂದ ಮನೆಯ ಶ್ವಾನಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಪುತ್ತೂರು ಅಶ್ವಿನ್ ಅಪ್ಟಿಕಲ್ಸ್ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರದಲ್ಲಿ ಅಟೋ ಡ್ರೈವರ್‌ಗಳಿಗೆ ಉಚಿತ ಕಣ್ಣಿನ ಗ್ಲಾಕೋಮ ಪರೀಕ್ಷೆ, ಕನ್ನಡಕ ವಿತರಣೆ
ಪುತ್ತೂರು ಬ್ರಹ್ಮಮೊಗೇರ ಸಮಾಜ ಬಾಂಧವರ ವತಿಯಿಂದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ
ಬೊಳುವಾರು ಆಂಜನೇಯನಗರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ಸಂಜೆ ೭ರಿಂದ ೩೮ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ದರ್ಬೆ ಆಫೀಸರ್ಸ್ ಕ್ಲಬ್ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಬ್ಯಾಡ್ಮಿಂಟನ್ ಶಿಬಿರ ಪ್ರಾರಂಭ
ತೆಂಕಿಲ ನರೇಂದ್ರ ಪಿಯು ಕಾಲೇಜಿನಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಆರ್ಟ್ಸ್‌ನಿಂದ ಕರಾಟೆ ಬೇಸಿಗೆ ಶಿಬಿರ ಪ್ರಾರಂಭ
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಪುತ್ತೂರು ಕ್ರಿಕೆಟ್ ಅಕಾಡೆಮಿಯಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ
ನೆಲ್ಲಿಕಟ್ಟೆ ಈಶ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ರಜಾ-ಮಜಾ ಪ್ರಾರಂಭ
ಪಡ್ಡಾಯೂರು ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ ಪ್ರಾರಂಭ
ಕಲ್ಲಾರೆ ಜೆಕೆ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦ರಿಂದ ಮಕ್ಕಳ ಬೇಸಿಗೆ ಶಿಬಿರ
ಕೊಳ್ತಿಗೆ ಮಾಲೆತ್ತೋಡಿ ದ.ಕ.ಜಿ.ಪಂ ಕಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ-ಪೆರ್ಲಂಪಾಡಿ ವತಿಯಿಂದ ಬೇಸಿಗೆ ಶಿಬಿರ `ಕಲಿಕಾ ಚೈತನ್ಯ’ದ ಉದ್ಘಾಟನೆ
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಬಲಿ ಹೊರಟು ಉತ್ಸವ, ಸಂಜೆ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭ರಿಂದ ಬಲಿ ಹೊರಟು ಉತ್ಸವ, ರಕ್ತೇಶ್ವರಿ, ಹುಲಿ ದೈವಗಳ ನುಡಿಕಟ್ಟುಗಳು, ೯ರಿಂದ ಮಹಾರಥೋತ್ಸವ, ಅಶ್ವತ್ಥ ಕಟ್ಟೆಪೂಜೆಗಳು, ೧೦ರಿಂದ ಜಾಜಿ ಮಲ್ಲಿಗೆ ಯಕ್ಷಗಾನ ಬಯಲಾಟ
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾತ್ರಿ ೭ಕ್ಕೆ ಗುಳಿಗನ ಕೋಲ
ಕೆಯ್ಯೂರು ಗ್ರಾಮ ಕೋಡಂಬು ಸುದೇಶ್ ರೈ ಮನೆಯಲ್ಲಿ ರಾತ್ರಿ ೭ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ
ಚಾರ್ವಾಕ ದೊಡ್ಡಮನೆ ಕಂಡಿಗ ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ, ನೇಮೋತ್ಸವ
ಬದನಾಜೆ ಕುಂದರ್ ಕುಟುಂಬದ ಮನೆಯಲ್ಲಿ ರಾತ್ರಿ ೭ರಿಂದ ಕುಪ್ಪೆಪಂಜುರ್ಲಿ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಮಂತ್ರದೇವತೆ, ಕಲ್ಲಾಲ ಗುಳಿಗ, ಕುಂಟಲ್ತಾಯ ದೈವಗಳ ನೇಮೋತ್ಸವ
ಸುಳ್ಯ ತಾಲೂಕು ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನ, ಮೊರಂಗಲ್ಲು ತರವಾಡು ಮನೆಯ ಗೃಹಪ್ರವೇಶ, ಶ್ರೀ ಧೂಮಾವತಿ ಸಪರಿವಾರ ದೈವಗಳ ನೇಮೋತ್ಸವ