ಪುತ್ತೂರು: ನರಿಮೊಗರು ,ಮುಕ್ವೆ ಪರಿಸರದಲ್ಲಿರುವ ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರಕ್ಕೆ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮಕ್ಕಳು ಅನುಭವಾತ್ಮಕ ಭೇಟಿ ನೀಡಿ ಆಹಾರ ಸಿರಿದಾನ್ಯಗಳಾದ ಶಾಮೆ,ಸಜ್ಜೆ ,ಬರಗು, ರಾಗಿ, ಕೊರಳೆ, ಜೋಳ, ಊದಲು,ನವನೆ, ಹಾರಕ,ಇತ್ಯಾದಿ ಆಹಾರ ವಸ್ತುಗಳಿಂದ ಸಿದ್ಧವಾಗುವ ಚಪಾತಿ,ಪೂರಿ, ಪಾನೀಯ , ಕುಕ್ಕೀಸ್,ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯಸ್ಥ ರಾಧಾಕೃಷ್ಣ ಹಾಗೂ ಉಮಾವತಿ ಸಮಗ್ರ ಮಾಹಿತಿಯನ್ನು ನೀಡಿದರು.
40 ವಿದ್ಯಾರ್ಥಿಗಳು ಭೇಟಿ ನೀಡಿದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಶಿಕ್ಷಕರಾದ ಕವಿತಾ, ಶಿಲ್ಪರಾಣಿ, ಸೌಮ್ಯ ಇವರು ಉಪಸ್ಥಿತರಿದ್ದರು. ರುಚಿಕರವಾದ ಪೇಯ, ಹಲಸಿನ ಹಣ್ಣಿನಿಂದ,ಬೀಜದಿಂದ ಆಗುವ ಕುಕ್ಕೀಸ್ ಗಳನ್ನು ಸ್ವಾಧಿಸಿದರು.