ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ- ಆಮಂತ್ರಣ ಬಿಡುಗಡೆ

0

ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ಎ.1 ರಂದು ನಡೆಯಿತು.

ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮವನ್ನು ದಿನೇಶ್‌ ಭಟ್‌ ಹಾಗೂ ಸುಭ್ರಹ್ಮಣ್ಯ ಭಟ್‌ ಮುಂಗೂರು ನೆರವೇರಿಸಿದರು.

ಈ ಸಂದರ್ಭದಲ್ಲಿ ಎ.1ರಿಂದ ಎ.22ರವರೆಗೆ ನಡೆಯಲಿರುವ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ನುಳಿಯಾಲು, ಸದಸ್ಯರಾದ ಸಂಜೀವ ಪೂಜಾರಿ ದಾಸಕೋಡಿ, ಪ್ರೇಮ ಶಿವಪ್ರಸಾದ್‌ ಶೆಟ್ಟಿ ಮಿತ್ತಿಮಾರ್‌,ಚಿದಾನಂದ ಪೂಜಾರಿ ಕಡೇಶಿವಾಲಯ, ಈಶ್ವರ ಪೂಜಾರಿ ಹಿರ್ತಡ್ಕ, ಸತೀಶ್ಚಂದ್ರ ಶೆಟ್ಟಿ ಅಮೈ ಬಾವಗುತ್ತು,ಶೃತಿ ಹರೀಶ್ಚಂದ್ರ ಭಂಡಾರಿ ಕಾಡಬೆಟ್ಟು, ಶೀನ ನಾಯ್ಕ ನೆಕ್ಕಿಲಾಡಿ , ಅರ್ಚಕ ವೃಂದ, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here