ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ರಜತ ಸಂಭ್ರಮ-ಅರ್ಧ ಏಕಾಹ ಭಜನೆ ಎ.5ರಂದು ಭಜನಾ ಮಂದಿರದಲ್ಲಿ ನಡೆಯಲಿದೆ.
ಇದರ ಆಮಂತ್ರಣವನ್ನು ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಅನಾವರಣಗೊಳಿಸಲಾಯಿತು.ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಸ್ಥಾಪಕಾಧ್ಯಕ್ಷ ಸೋಮಪ್ಪ ಗೌಡ ಜಾರಿಗೆತ್ತಡಿ,ಉಪಾಧ್ಯಕ್ಷರಾದ ಲೋಕಯ್ಯ ಗೌಡ ಅಂಗಡಿಮೂಲೆ, ಕಾರ್ಯದರ್ಶಿ ಹೊನ್ನಪ್ಪ ಬಿ.ಜೆ.,ಖಜಾಂಚಿ ಪುಟ್ಟಣ್ಣ ಪರಣೆ,ಸದಸ್ಯರಾದ ವಿಜಯ ಬಿ.ಜೆ.,ವಿಶ್ವನಾಥ ಜಾರಿಗೆತ್ತಡಿ,ನಿತಿನ್ ಅಂಗಡಿಮೂಲೆ, ಮೋಹನ್ ರೈ ಬರೆಮೇಲು,ಸುರೇಶ್ ಬಂಬಿಲದೋಳ ಉಪಸ್ಥಿತರಿದ್ದರು.

ನಳಿನ್ ಕುಮಾರ್ ಅವರಿಂದ ಆಮಂತ್ರಣ ಬಿಡುಗಡೆ
ಆಮಂತ್ರಣವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಸದಸ್ಯರಾದ ವಿಜಯ ಬಿ.ಜೆ.,ವಿಶ್ವನಾಥ ಜಾರಿಗೆತ್ತಡಿ,ನಿತಿನ್ ಅಂಗಡಿಮೂಲೆ ಉಪಸ್ಥಿತರಿದ್ದರು.