ಅಧ್ಯಕ್ಷ: ಹರೀಶ್ ಬಿರ್ಮನಕಜೆ, ಉಪಾಧ್ಯಕ್ಷೆ:ಸುಜಾತ ಮರಕ್ಕೂರು
ಆನಡ್ಕ: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ರಚನೆ ನಡೆಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷರಾಗಿ ಹರೀಶ್ ಬಿರ್ಮನಕಜೆ, ಉಪಾಧ್ಯಕ್ಷರಾಗಿ ಸುಜಾತ ಮರಕ್ಕೂರುರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಶ್ರೀಧರ, ರಾಮಚಂದ್ರ, ನಾರಾಯಣ ಸುವರ್ಣ, ಜಯಂತ, ಕೇಶವ, ಗಣೇಶ್, ಸುರೇಶ್ ಕುಮಾರ್, ವಿನೋದಾ, ವಸಂತಿ, ಮೋಹಿನಿ, ಯಮುನಾ, ರೇವತಿ, ಪ್ರಭಾ, ಸತ್ಯವತಿ, ವಿದ್ಯಾ, ಸೌಮ್ಯ ಹಾಗೂ ಪದನಿಮಿತ್ತ ಸದಸ್ಯರುಗಳಾಗಿ ಮುಖ್ಯಶಿಕ್ಷಕಿ ಫೆಲ್ಸಿಟಾ ಡಿ.ಕುನ್ಹಾ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ಆರೋಗ್ಯ ಕಾರ್ಯಕರ್ತೆ ಪವಿತ್ರಾ, ನಾಮನಿರ್ದೇಶಿತ ಸದಸ್ಯರುಗಳಾಗಿ ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಮಜಲು, ಹಿರಿಯ ಶಿಕ್ಷಕಿ ವಿಶಾಲಾಕ್ಷಿ, ವಿದ್ಯಾರ್ಥಿ ನಾಯಕ ಅಶ್ವಿತ್ ನಾಯಕ್‌ರವರು ಆಯ್ಕೆಗೊಂಡರು.
ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ನಾರಾಯಣ ಸುವರ್ಣರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಶಿಕ್ಷಕಿ ಮಾಲತಿ ಇಲಾಖಾ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಫೆಲ್ಸಿಟಾ ಡಿ ಕುನ್ಹಾ ಸ್ವಾಗತಿಸಿ ವಿಶಾಲಾಕ್ಷಿ ವಂದಿಸಿದರು. ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸೌಮ್ಯ, ನಿತಾ, ಪೂರ್ಣಿಮಾ ಸಹಕರಿಸಿದರು.