ನಾಥ ಪಂಥಿಯ ಜೋಗಿ ಸಮಾಜ ಸುಧಾರಕ ಸಂಘದ ಸತ್ಯನಾರಾಯಣ ಪೂಜೆ

0

ಪುತ್ತೂರು:ನಾಥ ಪಂಥಿಯ ಜೋಗಿ ಸಮಾಜ ಸುಧಾರಕ ಸಂಘ ಪುತ್ತೂರು ಇದರ ವತಿಯಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಮಾ.30ರಂದು ಪುರುಷಕರಟ್ಟೆಯಲ್ಲಿರುವ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಹರಿಕೃಷ್ಣ ಭಟ್ ಮಣಿಯರವರ ನೇತೃತ್ವದಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಬೆಳಿಗ್ಗೆ ಕಲಶ ಪ್ರತಿಷ್ಠೆ, ಪೂಜಾರಂಭ, ಸಮಾಜ ಬಾಂಧವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯ ಬಳಿಕ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸುಶಾಂತ್ ಆಚಾರ್ಯ ತಂಡವರಿಂದ ಭಕ್ತಿರಸಮಂಜರಿ ನಡೆಯಿತು.


ಸಂಘದ ಅಧ್ಯಕ್ಷ ನವೀನ್ ಡಿ. ದೋಳ್ತಟ್ಟ, ಉಪಾಧ್ಯಕ್ಷರಾದ ಆನಂದ ಮಣಿಯ, ಸುಜಾತ ಸತೀಶ್ ಇಂದಿರಾನಗರ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಪುರುಷ ಮುಗೇರಡ್ಕ, ಸಂಚಾಲಕ ದಯಾನಂದ ಪುತ್ತೂರಮೂಲೆ, ಗೌರವ ಅಧ್ಯಕ್ಷ ರವಿ ಮಣಿಯ, ಸಂಘಟನಾ ಕಾರ್ಯದರ್ಶಿ ಉಮೇಶ್ ಇಂದಿರಾನಗರ, ಖಜಾಂಚಿ ಜಗನ್ನಾಥ ನೆಲ್ಲಿಕಟ್ಟೆ, ಕಾರ್ಯದರ್ಶಿಗಳಾದ ಸಂತೋಷ್ ನಡುಗುಡ್ಡೆ, ಪೂರ್ಣಿಮಾ ಗಣೇಶ್ ಮುಗೇರಡ್ಕ, ಕಾರ್ಯದರ್ಶಿ ಯೋಗಿನಾಥ್ ಮುಗೇರಡ್ಕ, ಕ್ರೀಡಾ ಕಾರ್ಯದರ್ಶಿ ಭವಿತ್ ನಡುಗುಡ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಸುಬ್ರಾಯ ನೆಕ್ಕಿಲು, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಸುರುಳಿಮಜಲು, ಶಿವ ಮುಗೇರಡ್ಕ, ರವಿ ಮಾಯಂಗಲ, ರಮೇಶ್ ಮುಗೇರಡ್ಕ, ಗುರು ಮಣಿಯ, ರಮೇಶ್ ಮುಕ್ವೆ, ಕಿರಣ್ ಮುಕ್ವೆ, ಪ್ರವೀಣ್ ಏಳ್ಮುಡಿ, ಪೂರ್ಣಿಮಾ ಸಂತೋಷ್ ಪರ್ಲಡ್ಕ, ಜಯರಾಮ ಮರೀಲ್, ರಘು ಮಣಿಯ, ವಿಠಲ ಮುಕ್ವೆ, ಜಗನ್ನಾಥ ಪರ್ಲಡ್ಕ, ಅಶ್ವಿನ್ ಮುಗೇರಡ್ಕ, ಗಂಗಾಧರ ಮುಗೇರಡ್ಕ, ಸದಾಶಿವ ಮುಕ್ವೆ, ದಿನೇಶ್ ಕುಜುಮಗದ್ದೆ, ಧನುಷ್ ಕಲ್ಲಾರೆ ಹಾಗೂ ಕೇಶವ ಮುಗೇರಡ್ಕ ಸೇರಿದತೆ ನೂರಾರು ಮಂದಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here