ಮನೆ ಸಮೀಪ ಕಳ್ಳಭಟ್ಟಿ ಸಾರಾಯಿ ತಯಾರಿ : ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು!

0

ಬೆಳ್ತಂಗಡಿ: ಆಡಂಕುದ್ರು ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಉರ್ಬನ್‌ ಡಿಸೋಜ ರವರಿಗೆ ಸೇರಿದ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ತನಿಖೆ ನಡೆಸಿದಾಗ 5 ಲೀ ನಷ್ಟು ಕಳ್ಳಭಟ್ಟಿ ಸಾರಾಯಿ ಮತ್ತು 40 ಲೀ ನಷ್ಟು ಬೆಲ್ಲದ ಕೊಳೆ ಪತ್ತೆಯಾಗಿದೆ.

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ಹಾಗೂ ಅಬಕಾರಿ ಉಪ ಆಯುಕ್ತರು ದ.ಕ ಜಿಲ್ಲೆ ಮಂಗಳೂರು ಇವರ ನಿರ್ದೇಶನದಲ್ಲಿ ಹಾಗೂ ಗಾಯತ್ರಿ ಸಿ. ಹೆಚ್‌ ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ-1ರ ಮಾರ್ಗದರ್ಶನದಲ್ಲಿ ಕಮಲ ಹೆಚ್‌ ಎನ್‌ ಅಬಕಾರಿ ನಿರೀಕ್ಷಕರು ಮಂಗಳೂರು ದಕ್ಷಿಣ ವಲಯ-2 ರವರಿಗೆ ಬಂದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು.

ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಸಲಕರಣೆಗಳನ್ನು ಇಟ್ಟುಕೊಂಡು ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿದ್ದು, ತಯಾರಿಕಾ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಉರ್ಬನ್‌ ಡಿಸೋಜ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ರೂ. 16,000/- ಆಗಿರುತ್ತದೆ.

ಕಮಲ ಹೆಚ್‌ ಎನ್‌ ಅಬಕಾರಿ ನಿರೀಕ್ಷಕರು ಮಂಗಳೂರು ದಕ್ಷಿಣ ವಲಯ-2 ಇವರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದು, ಮಂಗಳೂರು ದಕ್ಷಿಣ ವಲಯ-2ರ ಕಛೇರಿಯ ಅಬಕಾರಿ ಉಪ ನಿರೀಕ್ಷಕರಾದ ಹರೀಶ್‌ ಪಿ, ಅಬಕಾರಿ ಪೇದೆಗಳಾದ ಬಸವರಾಜ ತೋರೆ ಮತ್ತು ಆನಂದ್‌ ಹಾಗೂ ಹಿರಿಯ ವಾಹನ ಚಾಲಕರಾದ ರಘುರಾಮ ಸಹಕರಿಸಿದರು.

LEAVE A REPLY

Please enter your comment!
Please enter your name here