ಪುತ್ತೂರು: ದರ್ಬೆ ಬುಶ್ರಾ ಟವರ್ಸ್ ಎದುರುಗಡೆಯ ಹರ್ಷ ಶೋರೂಂ ಮಳಿಗೆಯ ಪ್ರೀತಿ ಆರ್ಕೇಡ್ ನಲ್ಲಿ ವ್ಯವಹರಿಸುತ್ತಿರುವ ಜಿ-ಟೆಕ್ ಕಂಪ್ಯೂಟರ್ ಸಂಸ್ಥೆಯು ಮಾ. 25ರಂದು ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ಆಯೋಜಿಸಿದ “ಐಟಿ ಚಾಂಪಿಯನ್'” ಎಂಬ ವಿಶೇಷ ಸ್ಪರ್ಧೆಯಲ್ಲಿ ಶಾಲಾ ಮಕ್ಕಳು ತಮ್ಮ ಐಟಿ ಜ್ಞಾನವನ್ನು ಮೆರೆದರು. ಈ ಸ್ಪರ್ಧೆಯು ಪ್ರಾಥಮಿಕ ಹಂತವು ವಿವಿಧ ಶಾಲೆಗಳಲ್ಲಿ ನಡೆಯಿತು ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ 70 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾದರು.
ಸ್ಪರ್ಧೆಯ ವಿಶೇಷತೆ:
ಅಂತಿಮ ಸುತ್ತನ್ನು ಮೂರು ಹಂತಗಳಲ್ಲಿ ನಡೆಸಲಾಗಿತ್ತು. ಲಿಖಿತ ಪರೀಕ್ಷೆ, ಮನರಂಜನೆ ಹಾಗೂ ಸವಾಲುಗಳ ಚಟುವಟಿಕೆಗಳು ಮತ್ತು ಲೈವ್ ಕ್ವಿಜ್. ಈ ಮೂಲಕ ವಿದ್ಯಾರ್ಥಿಗಳ ಐಟಿ ಜ್ಞಾನ, ಚಿಂತನೆ ಹಾಗೂ ಸೃಜನಶೀಲತೆಯನ್ನು ಪರೀಕ್ಷಿಸಲಾಯಿತು.
ವಿಜೇತರು:
ಹೈಸ್ಕೂಲ್ ವಿಭಾಗ:ಪ್ರಥಮ- ಫಾತಿಮತ್ ಅಲ್‌ಶಿಫಾ(8ನೇ), ದ್ವಿತೀಯ-ಅಮನ್ ಶಿಯಾಜ್ (9ನೇ), ತೃತೀಯ-ಫಾತಿಮತ್ ಸುಹೈರಾ (9ನೇ), ಬೆಥನಿ ಪ್ರೌಢಶಾಲೆ, ಪುತ್ತೂರು
ಪ್ರಾಥಮಿಕ ವಿಭಾಗ:ಪ್ರಥಮ-ಹರುಷ್ ರೈ ಪಾಪನ (7ನೇ), ದ್ವಿತೀಯ-ಮೊಹಮ್ಮದ್ ಉಮರ್(5ನೇ), ತೃತೀಯ-ಅವಿನ್ ಪಸನ್ನ (7ನೇ), ಸಂತ ಫಿಲೋಮಿನಾ ಪ್ರಾಥಮಿಕ ಶಾಲೆ, ಪುತ್ತೂರು
ಭೇಷ್ ಹೇಳಿದ ಮಕ್ಕಳು:
ದರ್ಬೆಯ ಜಿ.ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ರವರು ಮಕ್ಕಳಲ್ಲಿನ ತಂತ್ರಜ್ಞಾನ ಜ್ಞಾನವನ್ನು ಹೆಚ್ಚಿಸಲು ಮತ್ತು ಅವರ ಸೃಜನಶೀಲತೆ ಹಾಗೂ ನಿರ್ಧಾರ ಶಕ್ತಿಯನ್ನು ಉತ್ತೇಜಿಸಲು ಏರ್ಪಡಿಸಿದ ಈ ಕಾರ್ಯಕ್ರಮ ಒಳ್ಳೆಯ ವೇದಿಕೆಯಾಗಿದ್ದು ಇದು ನಿರಂತರ ಮುಂದುವರೆಯಲಿ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಕಾರ್ಯಕ್ರಮದ ಬಗ್ಗೆ ಭೇಷ್ ಹೇಳಿದರು.
‘ಐಟಿ ಮ್ಯಾಜಿಕ್ ‘ ಶಿಬಿರ..
ಮಕ್ಕಳಿಗಾಗಿ ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಪುತ್ತೂರು ಸಂಸ್ಥೆಯು ಪ್ರಸಕ್ತ ಬೇಸಿಗೆ ಕಾಲದಲ್ಲಿ ‘ಐಟಿ ಮ್ಯಾಜಿಕ್” ಎಂಬ ವಿಶೇಷ ಕೋರ್ಸ್ ಅನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಮಕ್ಕಳು ತಂತ್ರಜ್ಞಾನ ಜ್ಞಾನವನ್ನು ಉಲ್ಲಾಸಭರಿತ ಶೈಲಿಯಲ್ಲಿ ಕಲಿಯುವ ಅವಕಾಶ ಪಡೆಯಲಿದ್ದಾರೆ. ಐಟಿ ಕುರಿತಾದ ತಂತ್ರಗಳು, ಆಟಗಳ ಮೂಲಕ ಕಲಿಕೆ, ಆನ್ಲೈನ್ ಟೂಲ್ಸ್ ಬಳಸುವ ಕಲಿಕೆ ಮುಂತಾದ ವಿಷಯಗಳನ್ನು ಆಸಕ್ತಿದಾಯಕವಾಗಿ ಉಣಬಡಿಸಲಿದ್ದು, ಮಕ್ಕಳ ಮುಂದಿನ ವೃತ್ತಿ ಬೆಳವಣಿಗೆಯಲ್ಲಿ ಇದು ಅಮೂಲ್ಯವಾದ ಅನುಭವ ನೀಡಲಿದೆ. ‘ಐಟಿ ಚಾಂಪಿಯನ್’ ಮತ್ತು ‘ಐಟಿ ಮ್ಯಾಜಿಕ್” ಶಿಬಿರಗಳ ಮೂಲಕ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಬೆಳಕು ಹೊತ್ತೊಯ್ಯುವ ನಿರೀಕ್ಷೆಯಾಗಿದ್ದು ಹೆಚ್ಚಿನ ವಿವರಗಳಿಗೆ “ಜಿ.ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಪುತ್ತೂರು, ಪ್ರೀತಿ ಆರ್ಕೇಡ್, ದ್ವಿತೀಯ ಅಂತಸ್ತು, ದರ್ಬೆ, ಪುತ್ತೂರು, ಮೊ:761923714 ನಂಬರಿಗೆ ಸಂಪರ್ಕಿಸಬಹುದು.