ಕೊಳ್ತಿಗೆ: ಮಾಲೆತ್ತೋಡಿ ಶಾಲೆಯಲ್ಲಿ ಬೇಸಿಗೆ ಶಿಬಿರ ಕಲಿಕಾ ಚೈತನ್ಯ-2025 ಉದ್ಘಾಟನೆ

0

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಪೆರ್ಲಂಪಾಡಿ ಇದರ ವತಿಯಿಂದ ಮಾಲೆತ್ತೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ‘ಕಲಿಕಾ ಚೈತನ್ಯ-2025’ ಇದರ ಉದ್ಘಾಟನಾ ಸಮಾರಂಭ ಎ.1ರಂದು ಮಾಲೆತ್ತೋಡಿ ಶಾಲೆಯಲ್ಲಿ ನಡೆಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎನ್.ಪದ್ಮಪ್ರಸಾದ್ ರೈಯರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,ಮಕ್ಕಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳೊಂದಿಗೆ ಈ ಶಿಬಿರವನ್ನು ಮಾಡಿದ್ದೇವೆ. ಮುಖ್ಯವಾಗಿ ಇದರಲ್ಲಿ ಮರಾಟಿ ಸಮಾಜ ಸೇವಾ ಸಂಘದವರ ಕೊಡುಗೆ ಅಪಾರವಾಗಿದೆ. ಈ ಶಿಬರ ನಡೆಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮರಾಟಿ ಸಂಘಕ್ಕೆ ಹಾಗೂ ಶಾಲೆಗೆ ಒಂದು ಅವಿನಾಭಾವ ಸಂಬಂಧ ಇದ್ದು ಶಾಲೆಯ ಪ್ರತಿಯೊಂದು ಅಭಿವೃದ್ಧಿಯಲ್ಲೂ ಸಂಘದಿಂದ ಒಳ್ಳೆಯ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯಗುರು ವೀರಪ್ಪ ಗೌಡ ದುಗ್ಗಳರವರು ಮಾತನಾಡಿ, ಗ್ರಾಮದ ಮೂಲೆಯಲ್ಲಿರುವ ಇಂತಹ ಮಾಲೆತ್ತೋಡಿ ಶಾಲೆಯಲ್ಲೂ ಇಂತಹ ಒಳ್ಳೆಯ ಶಿಬರಗಳನ್ನು ನಡೆಯುತ್ತಿರುವ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿ, ಮರಾಟಿ ಸಂಘದವರು ಹಾಗೇ ಶಾಲಾ ಗುರು ವೃಂದದವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಮಕ್ಕಳ ಪ್ರತಿಭೆಗಳಿಗೆ ವೇದಿಕೆಯೊಂದಿಗೆ ಶಿಬಿರದ ಮೂಲಕ ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭಹಾರೈಸಿದರು.

ಕೊಳ್ತಿಗೆ ಗ್ರಾಪಂ ಸದಸ್ಯೆ ನಾಗವೇಣಿ ಕೆಯವರು ಮಾತನಾಡಿ, ಮಕ್ಕಳಿಗೆ ಪ್ರತಿಭೆಗಳಿಗೆ ಅವಕಾಶ ಕೊಡುವಂತಹ ಇಂತಹ ಶಿಬಿರಗಳು ಪ್ರತಿಯೊಂದು ಶಾಲೆಯಲ್ಲೂ ನಡೆಯಬೇಕು, ಪ್ರತಿಭೆಗಳಿಗೆ ಅವಕಾಶ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಆ ಮೂಲಕ ಮಕ್ಕಳಿಗೆ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬ ಹೆತ್ತವರು ಶ್ರಮವಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು. ಮಾಲೆತ್ತೋಡಿ ಶಾಲಾ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿಯವರು ಮಾತನಾಡಿ, ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಕೊಡುವಂತಹ ಎಲ್ಲಾ ವಿಷಯಗಳನ್ನು ಮಕ್ಕಳು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿ ಮರಾಟಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಎಂರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ವೆಂಕಪ್ಪ ನಾಯ್ಕ ಕಣ್ಣಕಜೆರವರು ಮಾತನಾಡಿ, ಈ ಶಿಬಿರ ಆಯೋಜನೆಯ ಹಿಂದೆ ಮರಾಟಿ ಸಂಘ ಮಾತ್ರವಲ್ಲ ಶಾಲಾ ಶಿಕ್ಷಕ ವೃಂದ ಹಾಗೇ ಪೋಷಕರ, ಊರವರ ಸಹಕಾರ ಬಹಳಷ್ಟಿದೆ ಅದಕ್ಕಾಗಿ ನಾವು ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿದ್ಯಾರ್ಥಿಗಳಲ್ಲಿರುವ ಆಸಕ್ತಿ, ಪ್ರತಿಭೆಗಳನ್ನು ಗುರುತಿಸಿ ಆ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದೊಂದಿಗೆ ಈ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಪ್ರತಿಯೊಬ್ಬರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.



ಮಾಲೆತ್ತೋಡಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮರಾಟಿ ಸೇವಾ ಸಂಘದ ಖಜಾಂಜಿ ಜಗನ್ನಾಥ ಎಂ ಮಾಲೆತ್ತೋಡಿ ಸ್ವಾಗತಿಸಿದರು.ಸಂಘದ ಕಾರ್ಯದರ್ಶಿ ಭವಿತ್ ಕುಮಾರ್ ಮಾಲೆತ್ತೋಡಿ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಕೆ.ಪಿ ವರ್ಣಿಕಾ ರೈ ಕಾರ್ಯಕ್ರಮ ನಿರೂಪಿಸಿದರು.

ಶಿಬಿರವು ಎ.೧ ರಿಂದ ೫ ರ ತನಕ ನಡೆಯಲಿದೆ. ಶಿಬಿರದಲ್ಲಿ ಜೀವನದ ಮೌಲ್ಯಗಳು, ಡ್ರಾಯಿಂಗ್, ಸಂಸ್ಕಾರ ತರಬೇತಿ, ಔಷಧೀಯ ಸಸ್ಯಗಳು ಮನೆಮದ್ದು ಮತ್ತು ಅಡುಗೆ ಕರಕುಶಲ ಕಲೆ, ಡ್ರಾಯಿಂಗ್ ಜೀವಜಗತ್ತಿನ ವಿಸ್ಮಯಗಳು, ಹಾವು ಮತ್ತು ನಾವು, ರಂಗ ತರಬೇತು ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತು ನೀಡಲಿದ್ದಾರೆ.

LEAVE A REPLY

Please enter your comment!
Please enter your name here