ಪುತ್ತೂರು: ಹನುಮಗಿರಿ ಕ್ಷೇತ್ರದಲ್ಲಿ ಎ.6ರ ರಾಮನವಮಿ ಮತ್ತು ಎ.12ರ ಹನುಮ ಜಯಂತಿಯಂದು ಹನುಮಗಿರಿ ಜಾತ್ರೆ ನಡೆಯಲಿದೆ.
ಎ.6ರಂದು ಬೆಳಿಗ್ಗೆ ಶ್ರೀಕೋದಂಡರಾಮ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ರಿಂದ ವಿಶೇಷ ಕಲಶಾಭಿಷೇಕ, ಪಂಚಮುಖಿ ಆಂಜನೇಯ ಸ್ವಾಮಿ ಮತ್ತು ಶ್ರೀಕೋದಂಡರಾಮ ದೇವರ ಭೇಟಿ, ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ಕುಮಾರಿ ಸ್ನೇಹ ಇವರಿಂದ ಕೋದಂಡರಾಮ ಸನ್ನಿಧಿಯಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಎ.10ರಂದು ಮಧ್ಯಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಉಗ್ರಣ ತುಂಬಿಸುವುದು, ರಾತ್ರಿ ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ, ಪವಮಾನ ರಥೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಎ.11ರಂದು ಬೆಳಿಗ್ಗೆ 10ರಿಂದ ನಾಗತಂಬಿಲ, ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ತಾಯಂಬಕ ಸೇವೆ, ಮಹಾಪೂಜೆ, ಶ್ರೀದೇವರ ಬಲಿ ಹೊರಡುವುದು, ಉತ್ಸವ ಬಲಿ, ಬೆಡಿ ಸೇವೆ, ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಎ.12ರಂದು ಬೆಳಿಗ್ಗೆ 10ರಿಂದ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.