ಬುರೂಜ್ ಶಾಲೆ: ನವೋದಯ ಇಂಗ್ಲೀಷ್ ಗ್ರಾಮರ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ

0

ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಅಂಕರ್ ಜಾಲ್ ನಿವಾಸಿ ಹುಸೈನ್ ಮತ್ತು ಯಾಸ್ಮೀನ್ ದಂಪತಿಯ ಪುತ್ರಿ ಐದನೇ ತರಗತಿಯ ಶಝಾ ಫಾತಿಮಾ ರಾಜ್ಯ ಮಟ್ಟದಲ್ಲಿ ಪ್ರಥಮ, ಇರ್ವತ್ತೂರು ಪದವು ಪಡೆ ಮನೆ ನಿವಾಸಿ ಸತೀಶ್ ಮತ್ತು ಮಿನಾಕ್ಷಿ ಕೆ.ಎಸ್ ದಂಪತಿಯ ಪುತ್ರ ಎರಡನೇ ತರಗತಿಯ ಭವಿತ್, ದಂಡೆಗೋಳಿ ನಿವಾಸಿ ಮಂಜುಪ್ರಸಾದ್ ಮತ್ತು ಶ್ರೀನಿಧಿ ದಂಪತಿಯ ಪುತ್ರನಾದ ಹಾರ್ದಿಕ್, ನೇರಳಕಟ್ಟೆ ನಿವಾಸಿ ಮೊಹಮ್ಮದ್ ಅನ್ಸಾರ್ ಮತ್ತು ದಿಲ್ ಶಾದ್ ದಂಪತಿಯ ಪುತ್ರಿಯಾದ ಒಂಭತ್ತನೇ ತರಗತಿಯ ಹನ್ಹಾ ಆಯಿಷಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿರುತ್ತಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ,ಪೊಷಕರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here