ಎ.12,13,14: ಪಮ್ಮಲ ಮಖಾಂ ಆಂಡ್ ನೇರ್ಚೆ – 3 ದಿನಗಳ ಧಾರ್ಮಿಕ ಮತಪ್ರಭಾಷಣ

0

ಪುತ್ತೂರು: ಪಮ್ಮಲ (ಪಡುಮಲೆ) ಮಖಾಂ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಅಲ್ ವಲಯುಲ್ಲಾಹಿಯವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪಮ್ಮಲ ಮಖಾಂ ಆಂಡ್ ನೇರ್ಚೆ ಕಾರ್ಯಕ್ರಮ ಹಾಗೂ ಮೂರು ದಿನಗಳ ಧಾರ್ಮಿಕ ಮತ್ರಪ್ರಭಾಷಣ ಕಾರ್ಯಕ್ರಮವು ಎ.12,13,14ರಂದು ಪಮ್ಮಲ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಜಮಾತ್ ಕಮಿಟಿ ಅಧ್ಯಕ್ಷರಾದ ಹಾಜಿ ಮಹಮ್ಮದ್ ಬಡಗನ್ನೂರು ತಿಲಿಸಿದ್ದಾರೆ.

ಎ.12ರಂದು ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ಪುತ್ತೂರು ಇವರು ದುವಾಶೀರ್ವಚನ ನೀಡಲಿದ್ದು, ಸ್ಥಳ ಖತೀಬ್ ಸಂಶುದ್ದೀನ್ ದಾರಿಮಿ ಸ್ವಾಗತಿಸಲಿದ್ದು, ಶಮೀರ್ ದಾರಿಮಿ ಕೊಲ್ಲಂರವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಎ.13ರಂದು ಹಾಫಿಲ್ ಜುನೈದ್ ಜೌಹರಿ ಕೊಲ್ಲಂ ಪ್ರವಚನ ನೀಡಲಿದ್ದು, ಎ.14ರಂದು ಅಸ್ಸಯ್ಯದ್ ಅಬ್ದುಲ್ ರಶೀದ್ ಅಲಿ ಶಿಹಾಬ್ ತಂಙಳ್ ದುವಾಶೀರ್ವನ ನೀಡಲಿದ್ದು, ನವಾಝ್ ಮನ್ನಾನಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಇದೇ ದಿನ ರಾತ್ರಿ 8 ಗಂಟೆಗೆ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here