ಪುತ್ತೂರು: ಪರಿವಾರ ಬಂಟರ ಪಾಂಡಿ ಕುಟುಂಬಸ್ಥರ ಧರ್ಮದೈವಗಳ ಪುನ: ಪ್ರತಿಷ್ಠ ಬ್ರಹ್ಮ ಕಲಶೋಶೋತ್ಸವ ಸಮಾರಂಭದ ಪ್ರಯುಕ್ತ ಎ.3 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿವಾರ ಬಂಟರ ಪಾಂಡಿ ಕುಟುಂಬಸ್ಥರ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಈಜು ಹಾಗೂ ಡೈವಿಂಗ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆಯನ್ನು ಮಾಡುತ್ತಿರುವ ಪಾಂಡಿ ಕುಟುಂಬದ ಹೆಮ್ಮೆಯ ಯುವ ಸಾಧಕ ನಂದನ್ ನಾಯ್ಕ್ ರನ್ನು ಸನ್ಮಾನಿಸಲಾಯಿತು. ಇವರು ಮುಕ್ವೆ ಮಜಲುಮಾರು ನಿವಾಸಿ ರವಿಸಂಪತ್ ನಾಯ್ಕ್ ಮತ್ತು ಕ್ಷಮಿತ ದಂಪತಿಯ ಪುತ್ರ.