ಪುರಪ್ರವೇಶಕ್ಕೆ ತೆರಳಿದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿ : ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಧಿಯಲ್ಲಿ ಪುಷ್ಪಾರ್ಚನೆ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ದೇವರ ಗುಡ್ಡೆ ಭಟ್ರಬೈಲು ಎಂಬಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಕಾರ್ಕಳದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲ್ಪಟ್ಟ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯ ಪುರಪ್ರವೇಶದ ನೆಲೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ -ಮಹಾಕಾಳಿ ದೇವಾಲಯದಲ್ಲಿ ಶ್ರೀ ದೇವರ ಮೂರ್ತಿಗೆ ಪುಷ್ಪಾರ್ಚನೆಗೈದು ಬನ್ನೆಂಗಳ ಸರಳೀಕಟ್ಟೆ ಮಾರ್ಗವಾಗಿ ತೆಕ್ಕಾರಿಗೆ ಭಜನೆ ವಾದ್ಯಗೋಷ್ಠಿಗಳೊಂದಿಗೆ ಪುರಪ್ರವೇಶಗೈಯಲಾಯಿತು.


ಕಾರ್ಕಳದಿಂದ ತರಿಸಲಾದ ಈ ಮೂರ್ತಿಗೆ ಶುಕ್ರವಾರ ರಾತ್ರಿ ನಾಳ ದೇವಾಲಯದ ಬಳಿ ಯಥೋಪಚಾರದೊಂದಿಗೆ ಗೌರವ ಸಲ್ಲಿಸಲಾಗಿತ್ತು ಹಾಗೂ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲಾಗಿತ್ತು. ಶನಿವಾರ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾರವರ ಉಪಸ್ಥಿತಿಯಲ್ಲಿ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಲಾಯಿತು.


ಉಪ್ಪಿನಂಗಡಿ ದೇವಾಲಯಕ್ಕೆ ಆಗಮಿಸಿದ ಮೂರ್ತಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಪುಷ್ಪಾರ್ಚನೆಗೈದು ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣ ರಾವ್ ಅರ್ತಿಲ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ವಿಶ್ವಹಿಂದೂಪರಿಷತ್ ಅಧ್ಯಕ್ಷ ಸುದರ್ಶನ್ , ಪ್ರಮುಖರಾದ ತುಕರಾಮ ನಾಯಕ್ ನಾಗರಕೋಡಿ, ಲಕ್ಷ್ಮಣ್ ಭಟ್ರಬೈಲ್, ಪ್ರವೀಣ್ ರೈ, ಗಣೇಶ್‌ರಾಜ್, ಅಣ್ಣಿ ಪೂಜಾರಿ ಬಾಗ್ಲೋಡಿ, ಶರತ್ ಆನಳಿಕೆ, ಅನಂತ ಪ್ರಸಾದ್ ನೈತಡ್ಕ, ತುಳಸೀಧರ ಕೋಟ್ಯಾನ್, ಭರತ್ ಬೆನಪು, ಮಂಜುನಾಥ ಸಾಲಿಯಾನ್ , ಸತೀಶ್ ಹೊಸಮೊಗ್ರು, ಚಂದ್ರಿಕಾ ಅಣ್ಣಿಪೂಜಾರಿ, ಜನಾರ್ದನ ಪೂಜಾರಿ ಮರಮ, ರವೀಂದ್ರ ಪಿಲಿಬೈಲು, ಸುರೇಶ್ ಪುಳಿತ್ತಡಿ, ತಿಲಕ್ ವಿದ್ಯಾಪುರ, ಶ್ವೇತಾ ಬಾಗ್ಲೋಡಿ , ವಿದ್ಯಾನಾಯಕ್ ನಾಗರಕೋಡಿ, ಕೃಷ್ಣ ನಾಯಕ್ ಮರಮ, ಕೃಷ್ಣ ಐತಾಳ್ ಬಾಜಾರ, ಸಂತೋಷ್ ಕಜೆಕೋಡಿ, ತಿಮ್ಮಪ್ಪ ಪೂಜಾರಿ, ನವೀನ್ ರೈ, ಗುಣಕರ ಅಗ್ನಾಡಿ, ವೆಂಕಟೇಶ್ ರಾವ್, ಮೊದಲಾದವರು ಉಪಸ್ಥಿತರಿದ್ದರು.


ಕಾರ್ಕಳದ ವೀರೇಂದ್ರ ಶಿಲ್ಪಿಯವರಿಂದ ಹೊಯ್ಸಳ ಶೈಲಿಯಲ್ಲಿ ಕೆತ್ತನೆಗೊಳಗಾದ ಈ ಮೂರ್ತಿಯನ್ನು ವಿವಿಧ ಭಜನಾ ಮಂಡಳಿಗಳ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆಕ್ಕಾರಿಗೆ ಕೊಂಡೊಯ್ಯಲಾಯಿತು.

LEAVE A REPLY

Please enter your comment!
Please enter your name here