ಅರಿಯಡ್ಕ: ಕೌಡಿಚ್ಚಾರು ಪೇಟೆಯಲ್ಲಿ ಚರಣ್ ರಾಜ್ ಎಸ್.ವಿ ಮಾಲಕತ್ವದ ಶ್ರೀ ಕೃಷ್ಣ ಹೋಟೆಲ್ ಎ.6ರಂದು ಶುಭಾರಂಭಗೊಂಡಿದ್ದು, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಗೀತಾ ಕೊರಗಪ್ಪ ನಾಯ್ಕ ಮತ್ತು ಕೊರಗಪ್ಪ ನಾಯ್ಕ ಬಳ್ಳಿಕಾನ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ನಾರಾಯಣ ನಾಯ್ಕ ಚಾಕೋಟೆ, ಕುಂಬ್ರ ಸಿ.ಎ ಬ್ಯಾಂಕ್ ನಿರ್ದೇಶಕ ಉಮೇಶ್ ಗೌಡ ಕನ್ನಯ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ನಿರ್ದೇಶಕ ಶಿವಪ್ಪ ಕುಲಾಲ್ ಕೌಡಿಚ್ಚಾರು, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು, ಪ್ರಭಾಕರ ರೈ ಪೇರಾಲು, ನವೀನ್ ಗೌಡ ಸಾರೆಪ್ಪಾಡಿ, ಅಪ್ಪಯ್ಯ ನಾಯ್ಕ ಬಪ್ಪುಂಡೇಲು, ದೇವಪ್ಪ ನಾಯ್ಕ ಬಳ್ಳಿಕಾನ, ಯಶವಂತ್ ಬಳ್ಳಿಕಾನ, ಅಬೂಬಕ್ಕರ್ ಕೌಡಿಚ್ಚಾರು ಹಾಗೂ ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.