ಪುತ್ತೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ಲಾಕೋಮ ಮುಕ್ತ ಪ್ರಪಂಚದ ಅಂಗವಾಗಿ ಇಲ್ಲಿನ ಮುಖ್ಯರಸ್ತೆಯ ಪೊಲೀಸ್ ಸ್ಟೇಷನ್‌ನ ಬಳಿಯಿರುವ ಹೆಗ್ಡೆ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರ ಅಶ್ವಿನ್ ಅಪ್ಟಿಕಲ್ಸ್‌ನಲ್ಲಿ 5 ದಿನಗಳ ಕಾಲ ಆಟೋ ರಿಕ್ಷಾ ಚಾಲಕರಿಗೆ ಕಣ್ಣಿನ ಗ್ಲಾಕೋಮ ಉಚಿತ ಪರೀಕ್ಷೆ ನೆರವೇರಿತು.
ಎ.1ರಿಂದ ಪ್ರಾರಂಭಗೊಂಡ ಎ.5 ತನಕ ನಡೆದ ಶಿಬಿರದಲ್ಲಿ ಕಣ್ಣಿನ ದೃಷ್ಟಿ, ಒತ್ತಡ ಪರೀಕ್ಷೆಗಳನ್ನು ನಡೆಸಲಾಯಿತು. ಆರೋಗ್ಯ ಇಲಾಖೆಯ ನಿವೃತ್ತ ನೇತ್ರಾಧಿಕಾರಿ ಎಸ್. ಶಾಂತಾರಾಜ್ ನೇತೃತ್ವದಲ್ಲಿ ಪರೀಕ್ಷೆ ನಡೆಸಲಾಯಿತು. ಶಿಬಿರದಲ್ಲಿ 105 ಮಂದಿ ಆಟೋ ಚಾಲಕರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಚಾಲಕರಿಗೂ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. 7 ಮಂದಿಯನ್ನು ಉನ್ನತ ಪರೀಕ್ಷೆಗಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ನಿವೃತ್ತ ನೇತ್ರಾಧಿಕಾರಿ ಎಸ್. ಶಾಂತಾರಾಜ್ ತಿಳಿಸಿದ್ದಾರೆ.