





ಪುತ್ತೂರು: ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನ ಇದರ ವತಿಯಿಂದ ನಡೆಸಲ್ಪಡುವ ತಿಂಗಳ ಕಾರ್ಯಕ್ರಮದಲ್ಲಿ ಎ.6ರಂದು ಯೌವ್ವನಾಶ್ವ ಕಾಳಗ ಪ್ರಸಂಗದ ತಾಳಮದ್ದಳೆ ನಡೆಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ರಾಜಗೋಪಾಲ ಜೋಶಿ, ಶ್ರೀಪತಿ ನಾಯಕ್ ಅಜೇರು ಹಾಗೂ ಕು.ನಿಶ್ಮಿತಾ ರೈ ಸಹಕರಿಸಿದರು.
ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಪ್ರತಿಷ್ಟಾನದ ವಿದ್ಯಾರ್ಥಿಗಳಾದ ಅಧ್ವೈತ ಕೃಷ್ಣ, ಧನುಷ್ ಎಸ್, ಪ್ರಮಥೇಶ್ ಶರ್ಮ, ರಿಷಭ್ ರಾಮ್, ಹರ್ಷ, ಸುಧನ್ವ, ಗೌತಮ್ ಕೃಷ್ಣ, ಅನೀಶ್ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಶಂಕರ ಸಾರಡ್ಕ, ಕೇಶವ ಭಟ್ ಕೇಕನಾಜೆ, ಪ್ರಸನ್ನ ಬಳ್ಳಾಲ್, ಪ್ರಚೇತ್ ಆಳ್ವ, ಧನುಷ್, ಮಿಹಿರ್ ಭಟ್ ಸಹಕರಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಮ ಕೆ. ಸ್ವಾಗತಿಸಿದರು. ಗಣೇಶ್ ಡಿ ಎಸ್ ಮತ್ತು ಮನೆಯವರು ಈ ಕಾರ್ಯಕ್ರದ ಪ್ರಾಯೋಜಕತ್ವನ್ನು ವಹಿಸಿ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಸಂಘದ ಕಾರ್ಯದರ್ಶಿ ಶಂಕರ ಭಟ್, ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸೇರಿದಂತೆ ಸಂಘದ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎ.13 ರಂದು ಯಕ್ಷಗಾನ ಅರ್ಥಗಾರಿಕೆ ತರಗತಿ ಗುಂಡ್ಯಡ್ಕ ಈಶ್ವರ ಭಟ್ ಮಾರ್ಗದರ್ಶನದಲ್ಲಿ ನಡೆಯುವುದೆಂದು ತಿಳಿಸಲಾಯಿತು.









