ಇಂದು ಮಧ್ಯಾಹ್ನ ದ್ವಿತೀಯ ಪಿಯು ಫಲಿತಾಂಶ ಪ್ರಕಟ

0

ಪುತ್ತೂರು: ಕರ್ನಾಟಕ ರಾಜ್ಯಾದ್ಯಂತ ಮಾರ್ಚ್ 01 ರಿಂದ 20 ರವರೆಗೆ ನಡೆಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಇಂದು ಪ್ರಕಟಿಸಲಾಗುತ್ತಿದೆ. ಮಧ್ಯಾಹ್ನ 01-30 ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ.

 ಫಲಿತಾಂಶವನ್ನು ವೀಕ್ಷಿಸಲು ಮಂಡಳಿಯ ವೆಬ್‌ಸೈಟ್‌ https://karresults.nic.in ಗೆ ಭೇಟಿ ನೀಡಿ ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ದಾಖಲಿಸಿ ಫಲಿತಾಂಶ ಚೆಕ್‌ ಮಾಡಬಹುದು.


ಈ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ಕ್ಕೆ 7.13 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್‌ ಮಾಡಿಕೊಂಡು, ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳ ಫಲಿತಾಂಶ ಶೀಟ್‌ನಲ್ಲಿ ಹೆಸರು, ಜನ್ಮ ದಿನಾಂಕ ಮಾಹಿತಿ, ರೋಲ್‌ ನಂಬರ್, ವಿಷಯವಾರು ಅಂಕಗಳು, ಒಟ್ಟು ಅಂಕ, ವಿದ್ಯಾರ್ಥಿಗಳ ಫಲಿತಾಂಶ ಸ್ಥಿತಿ ಮಾಹಿತಿ ಇರಲಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಚೆಕ್‌ ಮಾಡಲು ವಿಧಾನ

– ಮಂಡಲಿಯ ವೆಬ್‌ಸೈಟ್‌ ಲಿಂಕ್ http://www.karresults.nic.in/ ಗೆ ಭೇಟಿ ನೀಡಿ.
– ತೆರೆದ ವೆಬ್‌ಪೇಜ್‌ನಲ್ಲಿ ‘2nd PUC Main Examination 1 Results’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
– ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ.
– ಇಲ್ಲಿ ಮೊದಲಿಗೆ ದ್ವಿತೀಯ ಪಿಯುಸಿ ರಿಜಿಸ್ಟರ್‌ ನಂಬರ್ ಟೈಪಿಸಿ.
– ನಂತರ ಕಾಂಬಿನೇಷನ್‌ ಆಯ್ಕೆ ಮಾಡಿ.
– ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
– ಫಲಿತಾಂಶ ಶೀಟ್‌ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

LEAVE A REPLY

Please enter your comment!
Please enter your name here