*ಹತ್ತೂರ ಒಡೆಯನ ಜಾತ್ರೆಯೊಳಗೊಂದು ಸ್ಥಳೀಯ ಉದ್ಯಮವನ್ನು ಉತ್ತೇಜಿಸೋ , ಬೆಂಬಲಿಸೋ ಜಾತ್ರೆ…
*ಪುತ್ತೂರು ರೋಟರಿ ಯುವ ಸಂಘಟನೆಯಿಂದ ಆಯೋಜನೆ…
*ಏ.10 ರಿಂದ 20 ರ ತನಕ ನಡೆಯಲಿರುವ ಜಾತ್ರೆ…
*ಮೊದಲ ಇಪ್ಪತೈದು ಮಳಿಗೆಗೆ ಮಾತ್ರವೇ ಅವಕಾಶ…
ಪ್ರಧಾನಿ ಮೋದಿಜೀಯವರ ವೋಕಲ್ ಫಾರ್ ಲೋಕಲ್ ಎನ್ನುವ ಮಾತಿನಂತೆ, ಸ್ಥಳೀಯ ಆಹಾರ , ಉಡುಪು , ಶಿಕ್ಷಣ ಮತ್ತು ಇನ್ನೂ ಹತ್ತಾರು ಬಗೆಯ ಉದ್ಯಮವನ್ನು ಸ್ಥಳೀಯವಾಗಿ ಉತ್ತೇಜಿಸಿ , ಮತ್ತಷ್ಟೂ ಬೆಳೆಸಿ -ಉಳಿಸುವಂತಹ ಸಾಹಸಕ್ಕೆ ಪುತ್ತೂರಿನ ರೋಟರಿ ಯುವ ಸಂಘಟನೆಯು ಮುಂದೆ ಬಂದಿದೆ.
ಅದಕ್ಕಾಗಿಯೇ ಹತ್ತೂರಿಗೂ ಪ್ರಸಿದ್ಧಿ ಪಡೆದಿರುವ ಪುತ್ತೂರು ಒಡೆಯನ ಜಾತ್ರೋತ್ಸವದ ಸಲುವಾಗಿ ಈ ವಿನೂತನ ಕಾರ್ಯಕ್ರಮವನ್ನು ಏ. 10 ರಿಂದ ಏ.20 ತನಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಅದ್ಧೂರಿಯಾಗಿ “ಜಾತ್ರೆಯೊಳಗೊಂದು ಜಾತ್ರೆ “ಯೆಂಬ ಕಾರ್ಯಕ್ರಮ ಆಯೋಜನೆ ಮಾಡಿದೆ.ಇದರ ಮೂಲ ಉದ್ದೇಶ ಸ್ಥಳೀಯ ಹಲವಾರು ಬಗೆಯ ಉದ್ಯಮಕ್ಕೆ ನಿರಂತರ ಪ್ರೋತ್ಸಾಹ , ಬೆಂಬಲ ಮತ್ತು ಬೇಡಿಕೆ ಸಿಗುವಂತೆ ಮಾಡುವುದು.
ಪುತ್ತೂರಿನಲ್ಲಿ ಪ್ರಥಮವಾಗಿ ಏರ್ಪಡಿಸಲಾಗಿರುವ ಈ ವಿನೂತನ ಪರಿಕಲ್ಪನೆಯಲ್ಲಿ ಭಾಗವಹಿಸಲು ಶಿಕ್ಷಣ ಸಂಸ್ಥೆ ,ಸಹಕಾರಿ ಸಂಘ , ಬ್ಯಾಂಕಿಂಗ್ , ಆಹಾರ ಉದ್ಯಮ , ಕರಕುಶಲ ಮಳಿಗೆ ,ನರ್ಸರಿ ಹಾಗೂ ನಿರ್ಮಾಣ ಕ್ಷೇತ್ರ ಸಹಿತ ಇನ್ನೂ ಹಲವು ಬಗೆಯ ಉದ್ಯಮಿಗಳಿಗೆ ಅವಕಾಶ ನೀಡಲಾಗಿದ್ದು , ಮಳಿಗೆ ಆರಂಭಿಸಲು ತಯಾರಿ ಇರುವಂತವರಿಗೆ ಎಲ್ಲಾ ರೀತಿಯ ಸೌಕರ್ಯ , ಸ್ವಚ್ಛತಾ ಸಿಬಂದಿಯ ಸಹಿತ ಸುಸಜ್ಜಿತ ಮಳಿಗೆ ನೀಡಲಾಗುವುದು. ಮೊದಲ 25 ಮಳಿಗೆಗೆ ಮಾತ್ರ ಅವಕಾಶವಿದ್ದು ಆಸಕ್ತರು ಆಯೋಜಕರ ಮೊಬೈಲ್ ಸಂಖ್ಯೆ 9945170216/9480535708 ಸಂಪರ್ಕಿಸುವಂತೆ ರೋಟರಿ ಯುವ ಪ್ರಕಟಣೆ ತಿಳಿಸಿದೆ.