*ರೋಟರಿ ಕ್ಲಬ್ಬಿನ ಸಮಾಜಸೇವೆ ಜಗತ್ತಿಗೆ ಮಾದರಿಯಾದುದು – ಲೀಲಾವತಿ ಅಣ್ಣುನಾಯ್ಕ

*ವ್ಯಕ್ತಿ ತನ್ನನ್ನು ತಾನು ಸಮಾಜ ಸೇವೆಗರ್ಪಿಸಿಕೊಂಡಾಗ ನಿಜವಾದ ಖುಷಿ ಸಿಗುತ್ತದೆ – ಕೃಷ್ಣಶೆಟ್ಟಿ
ಪುತ್ತೂರು: ರೋಟರಿ ಕ್ಲಬ್ಬಿನ ಸಮಾಜ ಸೇವೆ ಜಗತ್ತಿಗೆ ಮಾದರಿಯದು ಎಂದು ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಹೇಳಿದರು. ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯನಗರ ಇಲ್ಲಿಗೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೆರೆಸ್ ಫ್ಲೋರಿಡಾ ಯು ಎಸ್ ಎ ಇದರ ವತಿಯಿಂದ ರೋ ಟೇರಿಯನ್ ವಿಶ್ವಾಸ್ ಶೆಣೈ ಇವರ ನೇತೃತ್ವದಲ್ಲಿ ಕೊಡ ಮಾಡಿದ ಶಾಲಾ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.ರೋಟರಿ ಕ್ಲಬ್ಬಿನಂತಹ ಸಂಸ್ಥೆಗಳು ಸರ್ಕಾರಿ ಶಾಲಾ ಪ್ರಗತಿಗೆ ಕೈ ಜೋಡಿಸಿದರೆ ಸರಕಾರಿ ಶಾಲೆಗಳು ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ಶಾಲಾ ಶೌಚಾಲಯದ ಕೀ ಹಸ್ತಾಂತರಿಸಿ ಮಾತನಾಡಿದ ರೋಟರಿ ಜಿಲ್ಲೆ 3180ರ ಪೂರ್ವ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ವ್ಯಕ್ತಿ ತನ್ನನ್ನು ತಾನು ಸಮಾಜ ಸೇವೆಗರ್ಪಿಸಿಕೊಂಡಾಗ ಸಿಗುವ ಖುಷಿಯೇ ನಿಜವಾದ ಖುಷಿ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿತದಲ್ಲಿ ಒಂದಿನಿತು ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು.
ರೋಟರಿ ಜಿಲ್ಲೆ 3180ರ ಇನ್ನೋರ್ವ ಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತರು ಮಾತನಾಡಿ ಸಮಾಜ ಸೇವೆ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಬದುಕಿನ ಭಾಗವಾಗಬೇಕು. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಕೆಲಸ ಮಾಡುತ್ತಿದೆ ಎಂದರು.
ಶಾಲಾ ಸ್ಥಾಪಕ ಅಧ್ಯಕ್ಷ, ಆರ್ಯಾಪು ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ ಆದ ಮಹಮ್ಮದ ಆಲಿ ಮಾತನಾಡಿ ಸಂಜಯ ನಗರ ಶಾಲೆಗೆ ರೋಟರಿ ಕ್ಲಬ್ ಬಹಳ ಸಹಕಾರವನ್ನು ನೀಡಿದೆ. ಇದೀಗ ಇನ್ನೊಂದು ಅವಶ್ಯಕತೆಯಾದ ಶೌಚಾಲಯ ನೀಡಿ ಶಾಲಾ ಬೆಳವಣಿಗೆ ಕಾರಣವಾಗಿದೆ ಎಂದರು
ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಮನ್ವಯಧಿಕಾರಿ ನವೀನ್ ವೇಗಸ್ ಮಾತನಾಡಿ ರೋಟರಿ ಕ್ಲಬ್ ಶಾಲೆಗೆ ಬಹಳ ಅಗತ್ಯವಾದ ಶೌಚಾಲಯ ನೀಡಿ ಶಾಲಾ ಅವಶ್ಯಕತೆಯನ್ನು ಪೂರೈಸಿದೆ. ಸರಕಾರಿ ಶಾಲೆಗೆ ಸಹಾಯ ಮಾಡುವುದಕ್ಕೆ ನಮ್ಮ ಶಾಲೆ ಎಂಬ ವೆಬ್ ಸೈ ಟ್ ಇದೆ. ಇದರ ಮೂಲಕ ದಾನ ಮಾಡಬಹುದಾಗಿದೆ ಎಂದರು.
ಶಾಲೆಗೆ ಶೌಚಾಲಯ ನೀಡಲು ಕಾರಣಕರ್ತರಾದ ರೋಟೇರಿಯನ್ ವಿಶ್ವಾಸ್ ಶೆಣೈ ಹಾಗೂ ಶಿಕ್ಷಕರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ರೋಟೇರಿಯನ್ ಮಾಮಚ್ಚನ್ ರವರನ್ನು ಅಭಿನಂದಿಸಲಾಯಿತು
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್ ಇವರ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯರಾದ ಮಮತಾ ರಂಜನ್, ರೋ. ಡಾ. ರವಿಪ್ರಕಾಶ್,ರೋ. ಅಶ್ರಫ್, ರೋ.ವಿನೀತ್ ಶೆಣೈ ಪುತ್ತೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು
ಶಾಲಾ ಮಕ್ಕಳ ಪ್ರಾರ್ಥಿ ಸಿದರು. ಶಾಲಾ ಮುಖ್ಯ ಗುರು ರಮೇಶ್ ಉಳಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು ಶಾಲಾ ಹಿರಿಯ ಶಿಕ್ಷಕಿ ಸ್ಮಿತಾಶ್ರೀ ಬಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಎಸ್ ಡಿ ಎಂ ಸಿ ಸದಸ್ಯರಾದ ರಾಜೇಶ್ ಆಚಾರ್ಯ, ಸವಿತಾ ಪಳಿಕೆ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲತಾ ಆನಂದ ಪೂಜಾರಿ, ಅತಿಥಿ ಶಿಕ್ಷಕಿಯಾದ ಸೌಮ್ಯಾ ಕೆ, ಗೌರವ ಶಿಕ್ಷಕಿಯಾದ ತೃಪ್ತಿ ಕುಮಾರಿ, ಅಡುಗೆ ಸಿಬಂದಿ ದಿವ್ಯಕುಮಾರಿ, ಹಿರಿಯ ವಿದ್ಯಾರ್ಥಿ ಸಂಘದ ಅಶ್ವಿತಾ ಅತಿಥಿಗಳನ್ನು ಗೌರವಿಸಿದರು