ಪುತ್ತೂರು: ತುಳುನಾಡಿನಲ್ಲಿ ಬಗೆದಷ್ಟು ಕಾರಣಿಕತೆ ದೈವ ದೇವರ ಶಕ್ತಿಗಳು ಗೋಚರಿಸುತ್ತಲೇ ಇದೆ. ಇದೀಗ ಪುತ್ತೂರಿನ ಕೋರ್ಟ್ ರಸ್ತೆಯ ಪರಿಸರದಲ್ಲಿ ಮಹಾಕಾಳಿ ದೇವಿ ಶಕ್ತಿಯೊಂದು ಪೂಜಿಸಲ್ಪಡುತ್ತಿದ್ದು. ಈ ದಿವ್ಯ ಸಾನಿಧ್ಯ ಜೀರ್ಣೋದ್ಧಾರದಕ್ಕೆ ಅಣಿಯಾಗುತ್ತಿದೆ. ಏಪ್ರಿಲ್ 6ರ ರಾಮನವಮಿಯ ದಿನ ವಾಸ್ತುಶಿಲಾ ಪ್ರತಿಷ್ಠಾಪನೆ ನಡೆದು ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ.
ಮಹಾಕಾಳಿ, ಮಹಾ ಲಕ್ಷ್ಮೀ, ಮಹಾ ಸರಸ್ವತಿ, ಪದ್ಮಾವತಿ ರೂಪಿಯಾದ ಪನ್ನಗ ಕನ್ಯಾ ದೇವಿಯನ್ನ ಜೈನರು ಹಾಗೂ ಬಂಗ ಅರಸರು ಆರಾಧಿಸುತ್ತಿದ್ದರು. ಬಂದ ಅರಸರು ತಮ್ಮ ಆರಾಧನೆಯ ಜೊತೆಗೆ ತಮ್ಮ ಕಾಲದಲ್ಲಿ ತೆರಿಗೆ ಸಂಗ್ರಹಕ್ಕಾಗಿ ಸ್ಧಾಪಿಸಲ್ಪಟ್ಟ ದೇವಿಯು ಸಾನಿಧ್ಯವು ಕಾಲಾನುಕಾಲದಲ್ಲಿ ಶಿಥಿಲಾವಸ್ಧೆಗೆ ತಲುಪಿತ್ತು. ಬಳಿಕ ಈ ಜಾಗದಲ್ಲಿ ನೆಲೆಸಿದ್ದ ಸಾರಸ್ವತ ಬ್ರಾಹ್ಮಣರು ಪ್ರತಿದಿನ ಭಜನೆ ಕೀರ್ತನೆಯನ್ನ ಮಾಡುವಾಗ ಈ ಕೀರ್ತನೆ ಭಜನೆಗೆ ಒಲಿದ ದೇವಿಯು ‘ನಾನು ಬರಲಾ ನಾನು ಬರಲಾ ನಾನು ನಿಮ್ಮ ಮನಗೆ ಬರಲಾ’ ಎಂದು 3 ಬಾರಿ ಕೇಳಿಕೊಂಡು ಈ ಸಾನಿಧ್ಯವನ್ನು ಸೇರಿ ಅವರ ಇಷ್ಠಾರ್ಥಗಳನ್ನು ಹಾಗೂ ಊರಿನ ಜನರ ಇಷ್ಠಾರ್ಥಗಳನ್ನ ನುಡಿಯ ಮೂಲಕ ನೆರವೇರಿಸಿಕೊಂಡು ಬರುತ್ತಿದ್ದಾರೆ. ಇದೇ ಮಹಾಕಾಳಿ ಕ್ಷೇತ್ರ ಈಗ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ.

ಈ ಹಿಂದೆ ಮಹಾಲಿಂಗೇಶ್ವರ ದೇವರ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿಯೂ ಈ ಸ್ಧಳ ಸಂಬಂಧ ದೇವಿಯ ಸಾನಿದ್ಯ ಜೀರ್ಣೋದ್ಧಾರವಾಗಬೇಕು ಎಂದು ಕಂಡು ಬಂದಿತ್ತು. ಅದರಂತೆ ಇದೀಗ ಭಕ್ತರೆಲ್ಲರನ್ನ ಸೇರಿಸಿಕೊಂಡು ದೇವಿಯ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಕೋರ್ಟ್ ರಸ್ತೆಯ ಪರಿಸರದಲ್ಲಿ ನೆಲೆಸಿರುವ ಜಗನ್ನಾಥ ಕಾಮತ್ ಕುಟುಂಬಸ್ಧರು ಮಹಾಕಾಳಿಯನ್ನ ಆರಾಧಿಸಿಕೊಂಡು ಬರುತ್ತಿದ್ದಾರೆ. ಜಗನ್ನಾಧ ಕಾಮತ್ ಕುಟುಂಬಸ್ಧರ ಹಾಗೂ ಊರಿನ ಭಕ್ತಾಧಿಗಳ ಉಪಸ್ಧಿತಿಯಲ್ಲಿ ಮಹಾಕಾಳಿ ದೇವಿ ಸನ್ನಿಧಿಯ ಜೀಣೋದ್ಧಾರಕ್ಕೆ ಏಪ್ರಿಲ್ 6ರಂದು ಕೆಸರು ಕಲ್ಲು ಹಾಕಿ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿದೆ. ಈಗಾಗಲೇ ಜೀರ್ಣೋದ್ಧಾರ ಸಮಿತಿಯನ್ನೂ ರಚಿಸಲಾಗಿದ್ದು, ಮೇ 10ಸಂಜೆ ಮಹಾಲಿಂಗೇಶ್ವರ ದೇವಾಲಯದಿಂದ ಭವ್ಯ ನಿಧಿಕುಂಭ ಮೆರವಣಿಗೆ ಲಕ್ಷ್ಮೀ ವೆಂಕಟ್ರಮಣ ದೇವಾಲಯದಿಂದಾಗಿ ಸಾಗಿ ಕೋರ್ಟ್ ರಸ್ತೆ ಮೂಲಕ ಕಿಲ್ಲೆ ಮೈದಾನದ ಸ್ಧಳ ಸಾನಿದ್ಯಕ್ಕೆ ಬರಲಿದೆ. ಮೇ.11ರಂದು ಶಢಾಧಾರ ಪ್ರತಿಷ್ಠೆ ನಡೆಯಲಿದೆ. ಭಕ್ತಾಧಿಗಳ ಇಷ್ಠಾರ್ಥವನ್ನ ನೆರವೇರಿಸುತ್ತಿರುವ ದೇವಿಯ ಸಾನಿಧ್ಯ ಸುಮಾರು 1ವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಭಕ್ತಾಧಿಗಳು ಬೆಳ್ಳಿ ಚಿನ್ನ ಹಣದ ನಿಧಿಕುಂಬ ಸಮರ್ಪಿಸಬೇಕಾಗಿ ಸಮಿತಿ ವತಿಯಿಂದ ವಿನಂತಿಸಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಹಾಗೂ ಹಲವು ದೇವಾಲಯಗಳ ನಿರ್ಮಾಣ ಕಾರ್ಯಗಳನ್ನ ಯಶಸ್ವಿಯಾಗಿ ನಡೆಸಿದ ಅನುಭವ ಹೊಂದಿರುವ ನಿಸರ್ಗ ಕನ್ ಸ್ಟ್ರಕ್ಸನ್ ರಾಜೇಂದ್ರ ಶಿಲ್ಪಿಯವರನ್ನ, ಮಹಾಕಾಳಿ ದೇವಿಯ ನೂತನ ಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದ್ದು, ಕೆಲಸದ ಜವಬ್ಧಾರಿಯನ್ನ ನೀಡಲಾಗಿದೆ.
ಭಕ್ತಾದಿಗಳ ಇಷ್ಟಾರ್ಥವನ್ನ ನೆರವೇರಿಸಿ ಬಾಳಿನಲ್ಲಿ ಬೆಳಕು ಚೆಲ್ಲುತ್ತಿರುವ ಮಹಾಕಾಳಿ ದೇವಿಯ ಸನ್ನಿಧಿ ಅಭಿವೃದ್ಧಿಗಾಗಿ ಭಕ್ತಾಧಿಗಳು ಭಕ್ತಿಯಿಂದ ಕೈ ಜೋಡಿಸಬೇಕಾಗಿದೆ. ಈ ಮೂಲಕ ಮಹಾಕಾಳಿ ದಿವ್ಯ ಶಕ್ತಿಯ ಕ್ಷೇತ್ರ ವಿಸ್ತಾರಗೊಂಡು ಬೆಳಗಬೇಕಾಗಿದೆ..
ವಾಸ್ತುಶಿಲಾ ಪ್ರತಿಷ್ಠಾಪನೆ ಸಂದರ್ಭದಲ್ಲಿ ಜಗನ್ನಾಥ ಕಾಮತ್ ಕುಟುಂಬಸ್ಧರು,ಉಡುಪಿಯ ಬನ್ನಂಜೆಯ ರಾಮದಾಸ್ ಭಟ್, ಹಿಂದೂ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಇಲ್ಲಿನ ಪರಿಸರದ ಭಕ್ತರು ಭಾಗಿಯಾಗಿದ್ದರು.