ಎ.9:ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ 12ನೇ ವರ್ಷಕ್ಕೆ ಪಾದಾರ್ಪಣೆ

0

ಮಾಸಿಕ ಥೈರಾಯಿಡ್ ಗ್ರಂಥಿ, ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ ಉಚಿತ ತಪಾಸಣೆ, ವಿಶೇಷ ಉಪನ್ಯಾಸ

ಪುತ್ತೂರು:ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಇದರ 12ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಜಂಟಿ ಸಹಯೋಗದಲ್ಲಿ ಎ.9 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ(ಮೂಳೆ ಸಾಂದ್ರತೆ) ಇದರ ಉಚಿತ ತಪಾಸಣೆಯು ಡಾ.ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ಜರಗಲಿದೆ.


ಪಾದಾರ್ಪಣೆ ಪ್ರಯುಕ್ತ ಕ್ಲಿನಿಕ್ ನಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವೈಯಕ್ತಿಕ ಸಮಾಲೋಚನೆ(ಕೌನ್ಸಿಲಿಂಗ್ ಥೆರಪಿ)ಯ ಮಹತ್ವದ ಕುರಿತು ಆಪ್ತ ಸಮಾಲೋಚನೆ ಮತ್ತು ಮನಶಾಸ್ತ್ರಜ್ಞರಾದ ಶ್ರೀಮತಿ ಶ್ರದ್ಧಾ ಎಲ್.ರೈರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here