ನಿಡ್ಪಳ್ಳಿ: ಇಲ್ಲಿಯ ಜನತಾ ಕಾಲನಿ ನಿವಾಸಿ ನಾಟಿ ವ್ಯೆದ್ಯೆ ಲಕ್ಷ್ಮೀ (ಎಲ್ಯಕ್ಕ) (90 ವ) ಎಂಬವರು ಏ.7ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಕೆಂಪು ರೋಗ, ಸರ್ಪಸುತ್ತು ಮುಂತಾದ ರೋಗಗಳಿಗೆ ಸೊಪ್ಪು ಮದ್ದು ನೀಡುತ್ತಿದ್ದರು. ಅಲ್ಲದೆ ದೃಷ್ಟಿ ತೆಗೆಯುವುದು, ಮಂತ್ರಿಸಿ ನೂಲು ಕಟ್ಟುವುದು ಮೊದಲಾದ ಕೆಲಸ ಮಾಡುತ್ತಿದ್ದ ಇವರು ಪ್ರಸಿದ್ದರಾಗಿದ್ದರು.
ಮೃತರು ಪುತ್ರ ಸುಂದರ ಪೂಜಾರಿ, ಸೊಸೆ ಕಮಲ, ಪುತ್ರಿಯರಾದ ಲೀಲಾ, ಲಲಿತ, ದಾಜಮ್ಮ, ಅಳಿಯ ಶಿವಪ್ಪ ಪೂಜಾರಿ ಪಟ್ಟೆ ನಿಡ್ಪಳ್ಳಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
