ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 98 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 96 ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 23 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 67 ವಿದ್ಯಾರ್ಥಿಗಳ ಪೈಕಿ ಪ್ರಥಮ ಶ್ರೇಣಿಯಲ್ಲಿ 18, ದ್ವಿತೀಯ ಶ್ರೇಣಿಯಲ್ಲಿ 24 ಹಾಗೂ ತೃತೀಯ ಶ್ರೇಣಿಯಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದಿರುವ ಈ ವಿದ್ಯಾರ್ಥಿಗಳು ಇಂಟರ್ನಲ್ ಅಂಕದ ಹೊರತಾಗಿಯೂ ಉತ್ತಮ ಸಾಧನೆಗೈದಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕ ಪಿ ವಿ ಗೋಕುಲ್ ನಾಥ್ ಅಭಿನಂದಿಸಿದ್ದಾರೆ.
ವಾಣಿಜ್ಯಶಾಸ್ತ್ರ/ಕಲಾ ವಿಭಾಗ
ಪ್ರಥಮ ಶ್ರೇಣಿಯಲ್ಲಿ ಮಹಮ್ಮದ್ ಅರ್ಷಕ್ – 468, ಶೇಕ್ ಝಾರಾ ಇಬ್ರಾಹಿಂ – 449, ಅಪೇಕ್ಷ – 444, ಚಿರಾಗ್ ಚೆಂಗಪ್ಪ – 436, ಮಹಮ್ಮದ್ ಆಶಿಕ್ – 434, ಮಹಮ್ಮದ್ ಅನಾಸ್ – 432, ಪ್ರತೀಕ್ ಗೌಡ – 430, ಯುವರಾಜ್ – 423, ಲಶ್ವಿತ್ ಕುಮಾರ್ – 417, ಮುಹಮ್ಮದ್ ಅಯಾನ್ – 410, ದೀರಜ್ ಜೆ ನಾಯ್ಕ್ – 394, ಹರ್ಷಿತಾ ಕೆ ಎಸ್ – 387, ಫಾತಿಮತ್ ಶೀಬಾ – 384, ಪ್ರಗತಿ ಕೆ ವಿ – 384, ಹಸನ್ ಜವಾದ್ – 384, ಮಹಮ್ಮದ್ ಯಾಸಿರ್ – 382, ರಿಶಿತಾ – 376, ರಾಹುಲ್ ಪ್ರಸಾದ್ – 368 ಪಡೆದಿದ್ದಾರೆ.
ವಿಜ್ಞಾನ ವಿಭಾಗ ಪ್ರಥಮ ಶ್ರೇಣಿ:
ಮೊಹಮ್ಮದ್ ಫಾಲಿಲ್ -504, ಮೊಹಮ್ಮದ್ ಇರ್ಫಾನ್ – 470, ಮುಹಮ್ಮದ್ ನೌಫಲ್ -465, ಸನ್ಮಿತ್ ರೈ – 459, ಮಹಮ್ಮದ್ ಇರ್ಷಾದ್ ಬಿ – 447,ಮಹಮ್ಮದ್ ಸುರೈಹ್ 440,ಮನೀಶ್ – 431, ಚಿರಾಂತ್ – 409, ನಿಷ್ಮಾಮರ್ಯಮ್ – 407, ಮುಹಮ್ಮದ್ ಶಾಮಿಲ್ -406, ಮಾಚಯ್ಯ -400, ಮೊಹಮ್ಮದ್ ಸುಹೈಲ್ -393, ಮೊಹಮ್ಮದ್ ಫಹಾದ್ – 390, ಮುಹಮ್ಮದ್ ದಿಲ್‌ಕಶ್ – 388, ಅಹಮ್ಮದ್ ಉಝೈಮ್ – 388 ಪಡೆದುಕೊಂಡಿದ್ದಾರೆ.