ಸವಣೂರು ಸ.ಪ.ಪೂ.ಕಾಲೇಜ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 92 ಫಲಿತಾಂಶ‌

0

ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ‌ ದ್ವಿತೀಯ ಪಿಯುಸಿಯ 72 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 86.11 ಫಲಿತಾಂಶವನ್ನು ದಾಖಲಾಗಿದೆ. ಇದರಲ್ಲಿ ಡಿಸ್ಟಿಂಕ್ಷನ್ 6 ಪ್ರಥಮ ಶ್ರೇಣಿ 37 ದ್ವಿತೀಯ ಶ್ರೇಣಿ 13 ಹಾಗೂ ತೃತೀಯ ಶ್ರೇಣಿ 6 ಆಗಿರುತ್ತದೆ,


ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 25 ವಿದ್ಯಾರ್ಥಿಗಳಲ್ಲಿ 23 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 92 ಫಲಿತಾಂಶ ದಾಖಲಾಗಿರುತ್ತದೆ. ಈ ವಿಭಾಗದಲ್ಲಿ ನಿಶಾ 542 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 22 ವಿದ್ಯಾರ್ಥಿಗಳಲ್ಲಿ ಒಟ್ಟು 19 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 86.36 ಫಲಿತಾಂಶ ದಾಖಲಾಗಿರುತ್ತದೆ. ೫೪೦ ಅಂಕ ಪಡೆದ ಮಣಿಶ್ರೀ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 25 ವಿದ್ಯಾರ್ಥಿಗಳಲ್ಲಿ 20 ಮಂದಿ ಉತ್ತೀರ್ಣರಾಗಿ 80ಶೇಕಡ ಫಲಿತಾಂಶ ದಾಖಲಾಗಿರುತ್ತದೆ. 503 ಅಂಕ ಪಡೆದ ಆಯಿಶತುಲ್ ಅಫಲಾ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.


ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು:-
ವಿಜ್ಞಾನ ವಿಭಾಗ-
ಕೈಪಂಗಳ ದೋಳ ನಿವಾಸಿ ಶ್ರೀ ಉಮೇಶ್ ಕರ್ಕೆರ ಮತ್ತು ಮೋಹಿನಿ ದಂಪತಿಯ ಪುತ್ರಿ ನಿಶಾ 542, ದೋಳ್ಪಾಡಿ ಲಿಂಗಪ್ಪ ಕೆ ಮತ್ತು ವೇದಾವತಿ ಕೆ ಎಲ್ ದಂಪತಿಯ ಅವಳಿ ಪುತ್ರಿಯರಾದ ಜಶ್ವಿನಿ ಕೆ.ಎಲ್ 537,ಜನನಿ ಕೆ.ಎಲ್ 514, ಪುಣ್ಚಪ್ಪಾಡಿ ಗ್ರಾಮ ದೇವಸ್ಯ ನಿವಾಸಿ ಶ್ರೀ ಕೃಷ್ಣಪ್ಪ ಮತ್ತು ಶ್ರೀಮತಿ ಶೋಭಾ ದಂಪತಿ ಪುತ್ರ ಸೃಜನ್ ಡಿ 521, ಸವಣೂರು ಗ್ರಾಮದ ಬಸ್ತಿ ನಿವಾಸಿ ಶ್ರೀ ಸುಬ್ಬಣ್ಣ ಮತ್ತು ಶ್ರೀಮತಿ ಗಂಗಮ್ಮ ದಂಪತಿಯ ಪುತ್ರಿ ಬಿ.ಸೌಜನ್ಯ 516.


ವಾಣಿಜ್ಯ ವಿಭಾಗ – ಕಾಣಿಯೂರು ಗ್ರಾಮದ ಕಂಪ ನಿವಾಸಿ ಶ್ರೀ ಶೀನಪ್ಪ ಮತ್ತು ಶ್ರೀಮತಿ ಮೋಹಿನಿ ದಂಪತಿಯ ಪುತ್ರಿ ಮಣಿಶ್ರೀ. ಕೆ 540 ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ ಎನ್ ಪಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್‍ಯಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here