ವಿಜ್ಞಾನ ವಿಭಾಗದಲ್ಲಿ ಶೇಕಡ 100%- ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜು ಕಲ್ಲಡ್ಕ
ದ್ವಿತೀಯ ಪಿಯುಸಿ 2024-25ರ ವಾರ್ಷಿಕ ಪರೀಕ್ಷೆಯಲ್ಲಿ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ಅಪ್ರ ಬಿ.ಬಿ 577 ಅಂಕಗಳನ್ನು ಪಡೆದು, ವಿಜ್ಞಾನ ವಿಭಾಗದ ಆಯಿಷತ್ ಸಹಲಾ 561 ಅಂಕಗಳನ್ನು ಪಡೆದು, ಕಲಾ ವಿಭಾಗದ ಅವ್ವಮ್ಮ ಆಫ್ರಾ 522 ಅಂಕಗಳನ್ನು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 97.01% ಫಲಿತಾಂಶ ದಾಖಲಾಗಿರುತ್ತದೆ.
ವಾಣಿಜ್ಯ ವಿಭಾಗದಲ್ಲಿ 67 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 26 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರೆ,37 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆಶಿಯಾ ಮಿಸ್ಬಾ ಬಿ ಇತಿಹಾಸ ಮತ್ತು ವ್ಯವಹಾರ ಅಧ್ಯಯನದಲ್ಲಿ, ಅಫ್ರಾ ಬೀಬಿ ಕನ್ನಡ ಮತ್ತು ಸಂಖ್ಯಾಶಾಸ್ತ್ರದಲ್ಲಿ, ಫಾತಿಮತ್ ಜುಮೈಲತ್, ನೆಬಿಸತ್ ಫಾತಿಮಾ ಇವರು ಇತಿಹಾಸದಲ್ಲಿ, ಫಾತಿಮತ್ ಶಝ, ಮಷ್ರತ್ ಮಶ್ರೂರ, ದುಲೈಕ ಶನವಾಝ್ ಸಂಖ್ಯಾಶಾಸ್ತ್ರದಲ್ಲಿ, ಆಶಿಕ ಶಿಯಾನ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುತ್ತಾರೆ. ಕಲಾ ವಿಭಾಗದಲ್ಲಿ ಶೇಕಡ 92.85% ಫಲಿತಾಂಶ ದಾಖಲಾಗಿರುತ್ತದೆ.

ಕಲಾ ವಿಭಾಗದಲ್ಲಿ 14 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಓರ್ವ ವಿದ್ಯಾರ್ಥಿನಿ ವಿಶಿಷ್ಟ ಶ್ರೇಣಿಯಲ್ಲಿ,08 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ 30 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ವಿಶಿಷ್ಟ ಶ್ರೇಣಿಯಲ್ಲಿ 07, ಪ್ರಥಮ ಶ್ರೇಣಿಯಲ್ಲಿ 23 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಆಯಿಷತ್ ಸಹ್ಲಾ, ಜೀವಶಾಸ್ತ್ರ ವಿಭಾಗದಲ್ಲಿ 100 ಅಂಕಗಳನ್ನು ಗಳಿಸಿ ಸಾಧನೆ ಗೈದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು,ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.