
ಅರಿಯಡ್ಕ:ಸಮಾಜ ಕಾರ್ಯ ವಿಭಾಗ ಡಾ.ಎಂ.ವಿ ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಂಡ್ ಮ್ಯಾನೇಜ್ ಮೆಂಟ್ ವಿದ್ಯಾ ನಗರ ಮಂಗಳೂರು ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ( ಎಸ್.ಸಿ.ಐ) ಪುತ್ತೂರು ಲೀಜನ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಶಿಬಿರ -2025 ಇದರ ವತಿಯಿಂದ ಎ 8 ರಂದು ಕೌಡಿಚ್ಚಾರು ಪೇಟೆಯಲ್ಲಿ ಜನ ಜಾಗೃತಿಗಾಗಿ ,ಎಂ.ಎಸ್. ಡಬ್ಲ್ಯೂ ವಿದ್ಯಾರ್ಥಿಗಳು ನಡೆಸಿಕೊಟ್ಟ ಬೀದಿ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಪ್ರಗತಿ ಪರ ಕೃಷಿಕ ರಾಜೀವ ರೈ ಕುತ್ಯಾಡಿ, ಅರಿಯಡ್ಕ ತಿಮ್ಮಪ್ಪ ರೈ ಪಾಪೆ ಮಜಲು,ಸರಕಾರಿ ಪ್ರೌಢಶಾಲೆ ಪಾಪೆ ಮಜಲು ಇದರ ಎಸ್ ಡಿ ಎಂ ಸಿ ಕಾರ್ಯ ಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು,ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ಇದರ ಅಧ್ಯಕ್ಷೆ ಮಲ್ಲಿಕಾ ಜೆ ರೈ ಪುತ್ತೂರು, ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ಇದರ ಸದಸ್ಯೆ ಅನ್ನ ಪೂರ್ಣಿಮಾ ಆರ್ ರೈ ಕುತ್ಯಾಡಿ , ಡಾ.ಎಂ.ವಿ ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಫ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಸಹ ಪ್ರಾಧ್ಯಾಪಕಿಯರಾದ ಸ್ವಷ್ನ ಶೆಟ್ಟಿ ,ಸ್ವಾತಿ ಜೈನ್ ಮತ್ತು ಭವ್ಯ ಬಂಗೇರ , ಶಿಬಿರಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.