ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಮತ್ತು ಹರಿಹರೇಶ್ವರ ದೇವಸ್ಥಾನದ ಆಶ್ರಯದಲ್ಲಿ ಅ.12ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಅಶ್ವಿನ್ ಆಪ್ಟಿಕಲ್ಸ್ ಮತ್ತು ಯೋಗಕ್ಷೇಮ ಸಂಕೀರ್ಣ ಕಡಬ ಸಹಯೋಗದಲ್ಲಿ ದೇವಸ್ಥಾನದ ಕಲಾಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷ ಜಯಪ್ರಕಾಶ್ ಆರ್ ಅಧ್ಯಕ್ಷತೆಯಲ್ಲಿ ನಡೆದ ಈ ಶಿಬಿರವನ್ನು ರೊ| ಕಿಶೋರ್ ಕುಮಾರ್ ಕೂಜುಗೋಡು ಉದ್ಘಾಟಿಸಿದರು. ಮಂಗಳೂರಿನ ಹಿರಿಯ ನೇತ್ರ ಪರಿವೀಕ್ಷಕ ಎಸ್ ಶಾಂತರಾಜ್, ಕಡಬದ ಅಶ್ಚಿನ್ ಆಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಯೋಗಕ್ಷೇಮ ಸಂಕೀರ್ಣದ ಡಾ.ವಿಕಾಸ್ ಎಸ್‌ಎಂ, ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಅಂಙಣ, ಪಿಡಿಒ ಶ್ಯಾಮ್‌ಪ್ರಸಾದ್ ಎಂಆರ್, ದೇವಸ್ಥಾನದ ಆಡಳಿತಾಧಿಕಾರಿ ಕೆ.ರಾಜಣ್ಣ, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷ ಮನೀಷ್ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಒಟ್ಟು 102 ಮಂದಿ ಉಚಿತ ಕಣ್ಣಿನ ಶಿಬಿರದ ಸದುಪಯೋಗ ಮಾಡಿಕೊಂಡಿದ್ದು, ಈ ಪೈಕಿ 46 ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಅಲ್ಲದೆ, 7 ಮಂದಿಯನ್ನು ಕಣ್ಣಿನ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.