ಕಡಬ: ಬಲ್ಯ ಗ್ರಾಮದಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ ರಾಜಸ್ಥಾನದ ಮೂಲದ ಕಾರ್ಮಿಕ ಸಾಗರ್ ಸೈನಿ (19 ವ.) ಮಾ.28ರಂದು ರಾತ್ರಿ ನಾಪತ್ತೆಯಾಗಿದ್ದು, ಈ ಕುರಿತಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಗರ್ ಸೈನಿ, ರಾಜಸ್ಥಾನದ ಮಾಧವಪುರ ಜಿಲ್ಲೆ ಪೀಪಲಾಯಿ ಗ್ರಾಮದ ನಿವಾಸಿಯಾಗಿದ್ದಾರೆ. 25 ದಿನಗಳ ಹಿಂದೆ ಕಡಬದ ಕಡೆ ಟೈಲ್ಸ್ ಕೆಲಸಕ್ಕಾಗಿ ಬಂದಿದ್ದ ಸಾಗರ್, ಸ್ಥಳೀಯ ಕಾರ್ಮಿಕರೊಂದಿಗೆ ವಾಸವಿದ್ದು, ಮಾ. 28ರ ರಾತ್ರಿ 12 ಗಂಟೆಯ ಹೊತ್ತಿಗೆ ಕೊನೆಯ ಬಾರಿ ಕಾಣಿಸಿಕೊಂಡಿದ್ದ. ಮರದಿನ ಬೆಳಿಗ್ಗೆ 7 ಗಂಟೆಗೆ ಅವನ ಜೊತೆಯಲ್ಲಿದ್ದವರು ಎದ್ದು ನೋಡುವಾಗ ಸಾಗರ್ ರೂಮ್ನಲ್ಲಿ ಇರಲಿಲ್ಲ. ಮನೆಯ ಮಾಲಿಕನಾದ ನಾರಾಯಣ ಅವರಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಾಗರ್ನ ಮೊಬೈಲ್ (7665315083) ನಂಬರ್ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಅಲ್ಲದೆ, ಸಾಗರ್ ತನ್ನ ಬಟ್ಟೆ, ಸಾಮಾನುಗಳನ್ನು ತೆಗೆದುಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಸಹವರ್ತಿಗಳು ತಿಳಿಸಿದ್ದಾರೆ.
ಈ ಕುರಿತು ಸಂಬಂಧಿತರು ರಾಜಸ್ಥಾನದಲ್ಲಿರುವ ಸಾಗರ್ನ ಪೋಷಕರು ಹಾಗೂ ಸಂಬಂಧಿಕರಿಗೆ ಸಂಪರ್ಕಿಸಿ ಮಾಹಿತಿ ಕಲೆಹಾಕಲು ಯತ್ನಿಸಿದರೂ, ಅವರಿಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ಸಹೋದ್ಯೋಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಸಾಗರ್ ಸೈನಿಯ ಪತ್ತೆ ಹಚ್ಚಿ ಕೊಡುವಂತೆ ಮನವಿ ಮಾಡಿದ್ದಾರೆ. ಯಾರಿಗಾದರೂ ಸಾಗರ್ ಸೈನಿಯ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.
ಕಾಣೆಯಾದ ವ್ಯಕ್ತಿಯ ಗುರುತು ಲಕ್ಷಣಗಳು:
ಎತ್ತರ: ಸುಮಾರು 5 ಅಡಿ 3 ಇಂಚು ; ಮೈಬಣ್ಣ: ಗೋದಿ; ಶರೀರ: ಸಪೂರ; ಕೂದಲು: ಕಪ್ಪು; ವಸ್ತ್ರಗಳು: ಗುಲಾಬಿ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್; ಇತರೆ ಲಕ್ಷಣಗಳು: ಸಣ್ಣ ಮೀಸೆ ಮತ್ತು ಸಣ್ಣ ಗಡ್ಡವಿದೆ.