ಶಿಕ್ಷಕರ ಸ್ಥಾನಮಾನ ಗೌರಯುತವಾದುದು-ಜನಾರ್ದನ ಗೌಡ ಪಣೆಮಜಲ
ಕಡಬ: ಶಿಕ್ಷಕರ ಸ್ಥಾನಮಾನ ಗೌರಯುತವಾದುದು ಅದನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು ಅವರು ಹೇಳಿದರು. ಅವರು ಏ.7ರಂದು ಬಿಳಿನೆಲೆ ಬೈಲು ಶಾಲೆಯಲ್ಲಿ ನಡೆದ ಬಿಳಿನೆಲೆ ಬೈಲು ಶಾಲೆಯ ಶಿಕ್ಷಕಿ ದಮಯಂತಿ ಜಿ. ಅವರ ಬೀಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿ ಅಭಿನಂದನಾ ಭಾಷಣ ಮಾಡಿದರು.
ದೇವರ ಆಜ್ಞಾವರ್ತಿಯಾಗಿ ಗುರು ಕೆಲಸ ಮಾಡುತ್ತಾನೆ, ಗುರುವಿನಿಂದ ಸರಿಯಾಗಿ ವಿದ್ಯೆ ಕಲಿತವ ಜೀವನದಲ್ಲಿ ಎಂದೂ ಸೋಲಲಾರ, ಆದರೆ ಗುರುವನ್ನು ನಿಂದಿಸಿದವ ಎಂದೂ ಉದ್ಧಾರವೂ ಆಗಲ್ಲ ಇದಕ್ಕೆ ಹಲವಾರು ಜ್ವಲಂತ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಎಂದ ಅವರು, ದಮಯಂತಿಯವರು ಓರ್ವ ಶಿಕ್ಷಕರ ಮಗಳಾಗಿ ತನ್ನ ಶಿಕ್ಷಕಿ ವೃತ್ತಿಯಲ್ಲಿ ನಿರಂತರವಾಗಿ ಅವಿರತ ಶ್ರಮ ಮತ್ತು ಪ್ರಾಮಾಣಿಕತೆಯಿಂದ ವಿದ್ಯಾರ್ಥಿ ಹಾಗೂ ಊರವರ ಮನದಲ್ಲಿ ಅಚ್ಚಳಿಯದೆ ಅವರ ನೆನಪು ಉಳಿಸಿಕೊಂಡಿದ್ದಾರೆ. ಕೇವಲ ಶಿಕ್ಷಣ ನೀಡುವುದೇ ತನ್ನ ಕೆಲಸವಾಗದೆ ಪಠ್ಯೇತರ ಚಟುವಟಿಯಲ್ಲಿ ತೊಡಗಿಸಿಕೊಂಡು ದಮಯಂತಿಯವರು ಶಾಲೆಯ ಅಭಿವೃದ್ದಿಗೂ ಶ್ರಮ ವಹಿಸಿದ್ದು ಶ್ಲಾಘನಿಯ ಇವರ ನಿವೃತ್ತಿ ಜೀವನವು ಸುಳ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕಿರಣ್ ಕುಮಾರ್ ಅವರು ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್, ಪ್ರಾ.ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಬಿಳಿನೆಲೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಅವರು ಮಾತನಾಡಿ ಶುಭ ಹಾರೈಸಿದರು., ಸದಸ್ಯೆ ಬೇಬಿ, ಬಂಟ್ರ ಕ್ಲಸ್ಟರ್ ಮುಖ್ಯಸ್ಥ ಕುಮಾರ್ ಕೆ.ಜೆ., ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರೇಖಾ ಪೊಂಬೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಳಿನೆಲೆ ಬೈಲು ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಜಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕಿ ಸುನಂದಾ ಬಿ. ವಂದನಾರ್ಪಣೆ ಸಲ್ಲಿಸಿದರು. ಜಿ.ಪಿ.ಟಿ.ಶಿಕ್ಷಕಿ ಕ್ಷಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಕೇಶವ್, ಪುತ್ತಿಲ ಬೈಲಡ್ಕ ಶಾಲೆಯ ಮುಖ್ಯ ಶಿಕ್ಷಕ ಲೋಕನಾಥ್, ಬಿಳಿನೆಲೆ ಬೈಲು ಶಾಲೆ ಜಿಪಿಟಿ ಶಿಕ್ಷಕ ಲೋಹಿತ್ ಅವರು ನಿವೃತ್ತ ಶಿಕ್ಷಕಿ ದಮಯಂತಿ ಜಿ. ಯವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗೌರವ ಶಿಕ್ಷಕಿ ಪೂಜಾ ಕೆ. ಸನ್ಮಾನ ಪತ್ರ ವಾಚಿಸಿದರು. ನಿವೃತ್ತಿಗೊಳ್ಳುತ್ತಿರುವ ಶಿಕ್ಷಕಿ ದಮಯಂತಿ ಅವರು ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಸಮಾರಂಭದಲ್ಲಿ ಹಲವು ಶಾಲೆಯ ಶಿಕ್ಷಕರು, ಹಿತೈಷಿಗಳು, ವಿದ್ಯಾರ್ಥಿಗಳು, ಊರವರು ನಿವೃತ್ತ ಶಿಕ್ಷಕಿಯವರನ್ನು ಅಭಿನಂದಿಸಿದರು. ನಿವೃತ್ತ ಶಿಕ್ಷಕಿ ದಮಯಂತಿಯವರ ಜತೆ ಅವರ ಪತಿ ಕೊರಗಪ್ಪ ಗೌಡ ಹಾಗೂ ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.