ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವೀರಧಾರೆ ಪತ್ರಿಕೆ ಬಿಡುಗಡೆ

0

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕ ಚಟುವಟಿಕೆಗಳ ವರದಿಯನ್ನು ವೀರಧಾರೆ ಪತ್ರಿಕೆಯ ಮೂಲಕ ಬಿಡುಗಡೆ ಮಾಡಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲರವರು ಪತ್ರಿಕೆ ಬಿಡುಗಡೆ ಮಾಡಿ, ಶುಭಹಾರೈಸಿದರು.

ಅತ್ಯುತ್ತಮ ಎಸ್ ಡಿಎಂಸಿ ಪುಷ್ಠಿ ರಾಜ್ಯಪ್ರಶಸ್ತಿಯ ಅಂಗವಾಗಿ ದೊರೆತ ಒಂದು ಲಕ್ಷ ಬಹುಮಾನದಲ್ಲಿ ಶಾಲೆಗೆ ಕೊಡಮಾಡಿಸಿದ ಕಂಪ್ಯೂಟರ್ ಇನವರ್ಟರ್ ಗ್ರೈಂಡರ್ ಮತ್ತು ಮೈಕಾವನ್ನು ಗ್ರಾ.ಪಂ ಸದಸ್ಯರಾದ ಪದ್ಮಾವತಿ ಇವರು ಶಾಲಾರ್ಪಣೆ ಮಾಡಿ ಶುಭ ಹಾರೈಸಿದರು. ಎಸ್ ಡಿಎಂಸಿ ಅಧ್ಯಕ್ಷ ರವಿಚಂದ್ರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾರ್ಗದರ್ಶಕ ಶಿಕ್ಷಕ ವೆಂಕಟೇಶ ಶಾಲೆಯ ಪ್ರಗತಿ ಪರಿಶೀಲನೆ ಮಾಡಿ ಮೆಚ್ಚುಗೆಯ ನುಡಿಗಳನ್ನಾಡಿದರು.


ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಗುರು ತಾರಾನಾಥ ಸವಣೂರು ಶಾಲೆಗೆ ಪುಷ್ಠಿ ಪ್ರಶಸ್ತಿ ಬರಲು ಅಹೋರಾತ್ರಿ ಕೆಲಸ ಮಾಡಿದ ಹಿಂದಿನ ಅಧ್ಯಕ್ಷರಾದ ಅನುಪಮ ಮತ್ತು ಪ್ರಸ್ತುತ ಅಧ್ಯಕ್ಷರಾದ ರವಿಚಂದ್ರ ಇವರ ತಂಡವನ್ನು ಅಭಿನಂದಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸಲು ಕೋರಿದರು. ಶಾಲೆಯ ವಾರ್ಷಿಕ ಕ್ರಿಯಾಯೋಜನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಎಲ್ ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಬ್ಯಾಗ್ ಪುಸ್ತಕ ಕಿಟ್ ವಿತರಿಸಲಾಯಿತು. ಏಳನೆಯ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ರೂ.10000 ವೆಚ್ಚದ ಗ್ಲಾಸ್ ಕಪಾಟು ದೇಣಿಗೆಯಾಗಿ ನೀಡಿದರು. ಶಾಲೆಯ ಮಾತೆಯರ ಸಂಘದವರು ಮಕ್ಕಳಿಗೆ ಕಂಪಾಸ್ ಕೊಟ್ಟು ಬೀಳ್ಕೊಟ್ಟರು. ಬಳಿಕ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರವಿಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆದ ಎಸ್ ಡಿಎಂಸಿ ಸಭೆಯಲ್ಲಿ ಉಪಾಧ್ಯಕ್ಷೆ ನವ್ಯಾ,ಸದಸ್ಯರಾದ ಭವ್ಯ,ಅರ್ಚನಾ,ವಿನುತ,ಚಂದ್ರಾ ವತಿ,ನಳಿನಿ, ಹರೀಶ್ ಮಣ್ಣಗುಂಡಿ, ಸಂದೀಪ್ ಕಾಂತಿಲ, ರಝಾಕ್, ಶಾಲೆಯ ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಿದರು. ಶಿಕ್ಷಕರಾದ ಶೋಭಾ,ಕವಿತಾ ಹೇಮಾವತಿ, ಶಿಲ್ಪರಾಣಿ, ಸೌಮ್ಯ, ಸಂಚನಾ, ಸವಿತಾ ಮಧುಶ್ರೀ, ಚಂದ್ರಾವತಿ ಸಹಕರಿಸಿದರು ಶಿಕ್ಷಕಿ ಶ್ರೀಲತಾ ವಂದಿಸಿ ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here