ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಏ. 8 ರಂದು ಆನ್‌ಲೈನ್ ಫಲಿತಾಂಶ ಪ್ರಕಟಗೊಂಡಿದ್ದು, ಏ. 9 ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಮಧ್ಯೆ ಆನ್‌ಲೈನ್ ಫಲಿತಾಂಶ ನೋಡಿ ಅನೇಕ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆಗೆ ಈ ಬಾರಿಯ ಆನ್‌ಲೈನ್ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ದಾರಿಮಾಡಿಕೊಟ್ಟಿದೆ.
ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೋರ್ವಳ ಆನ್‌ಲೈನ್ ಫಲಿತಾಂಶ ನೋಡಿ ಆಕೆ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಆರಂಭದ ಫಲಿತಾಂಶದಲ್ಲಿ 517 ಅಂಕಗಳನ್ನು ಪಡೆದಿದ್ದರು. ಆದರೆ ಎರಡನೇ ಬಾರಿಗೆ ಫಲಿತಾಂಶ ನೋಡಿದಾಗ ಆಶ್ಚರ್ಯ ಕಾದಿತ್ತು..! ಒಟ್ಟು ಅಂಕ 517 ರ ಬದಲು 402 ಕ್ಕೆ ಇಳಿದಿತ್ತು. ವಿಷಯವಾರು ಅಂಕಗಳಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಸಂಜೆ ಮತ್ತೊಮ್ಮೆ ಪರಿಶೀಲಿಸಿದಾಗಲೂ ಇದೇ ರೀತಿ ಇತ್ತು. ಏ. 9 ರಂದೂ ಆನ್‌ಲೈನ್ ಫಲಿತಾಂಶ ಹೀಗೆಯೇ ಮುಂದುವರಿದಿದೆ. ಆದರೆ ಏ. 9 ರಂದು ಕಾಲೇಜಿನ ಅಧಿಕೃತ ಫಲಿತಾಂಶ ನೋಡಿ ವಿದ್ಯಾರ್ಥಿನಿ ನಿಟ್ಟುಸಿರುಬಿಟ್ಟಿದ್ದಾರೆ. ಒಟ್ಟು ಅಂಕ 517 ಹಾಗೂ ವಿಷಯವಾರು ಅಂಕಗಳಲ್ಲಿಯೂ ಸರಿಯಾದ ಅಂಕ ನಮೂದಿಸಲ್ಪಟ್ಟಿದೆ. ಅವರ ನಿರೀಕ್ಷಿತ ಫಲಿತಾಂಶವೂ ಅದೇ ಆಗಿತ್ತು.
ವಿದ್ಯಾರ್ಥಿಗಳೇ, ಮಾನಸಿಕವಾಗಿ ಕುಗ್ಗಬೇಡಿ..
ಆನ್ಲೈನ್ ಫಲಿತಾಂಶ ನೋಡಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗದೇ ಕಾಲೇಜಿನ ಅಧಿಕೃತ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ. ಅಧಿಕೃತ ಫಲಿತಾಂಶದಲ್ಲೂ ವ್ಯತ್ಯಾಸ ಕಂಡುಬಂದಲ್ಲಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಅವಕಾಶವಿದೆ. ಏಕಾಏಕಿ ವಿದ್ಯಾರ್ಥಿಗಳು ಭೀತಿಗೊಳಗಾಗಿ ತಪ್ಪು ನಿರ್ಧಾರಕ್ಕೆ ಹೋಗುವ ಮುನ್ನ ಅಂತಿಮ ಫಲಿತಾಂಶಕ್ಕಾಗಿ ಇರುವ ಎಲ್ಲಾ ಪ್ರಯತ್ನಗಳತ್ತ ಮುಖ ಮಾಡುವುದು ಒಳ್ಳೆಯದಲ್ಲವೇ ?
Nandu age agide sir
ಹಾಗಾದರೆ online ಫಲಿತಾಂಶ ಯಡವಟ್ಟುಆಗಿರುವ ಕಾರಣ, ಮಕ್ಕಳ ಮೇಲೆ ಮಾನಸಿಕವಾಗಿ ಅವರು ಪಾಸಾಗಿದ್ದರೂ ಫೇಲ್ ಆಗಿರುವ ಸಾಧ್ಯತೆಯಿಂದಾಗಿ ಜೀವಕ್ಕೆ ಅಪಾಯ ಆಗುವುದಕ್ಕೆ ಫಲಿತಾಂಶವೇ ಕಾರಣ, ಈಗಾಗಲೇ PUC ಒಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿದ್ದೀವಿ. ಆದಷ್ಟು ಪರೀಕ್ಷಾ ಫಲಿತಾಂಶ ಪ್ರಕಟಣೆ ಆಗುವ ಮುಂಚೆ ಅತೀ ಎಚ್ಚರದಿಂದ ಫಲಿತಾಂಶ ಪ್ರಕಟಿಸಬೇಕು ಅನ್ನೋದೇ ನನ್ನ ಅನಿಸಿಕೆ.
Nandu ange agide