ಪುತ್ತೂರು: ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಕುಟುಂಬದ ವತಿಯಿಂದ ಎ.5 ಮತ್ತು 6 ರಂದು ಅಣಿಲೆ ತರವಾಡು ಮನೆಯ ದೈವ- ದೇವರ ವರ್ಷಾವಧಿ ಉತ್ಸವ ಜರಗಿತು.
ಎ.5 ರಂದು ಗಣಪತಿ ಹವನ, ನಾರಾಯಣ ಪೂಜೆ, ಸರಸ್ವತಿ ಪೂಜೆ, ನಾಗ ತಂಬಿಲ, ಹರಿಸೇವೆ, ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಿತು. ಎ.6 ರಂದು ದೈವಗಳಿಗೆ ತಂಬಿಲ ಸೇವೆ, ಕೊರತಿ, ಗುಳಿಗ, ಕಲ್ಲುರ್ಟಿ ದೈವಗಳಿಗೆ ಸಮ್ಮಾನ ಹಾಗೂ ಗುರು ಕಾರ್ನವರಿಗೆ ಅಗೇಲು ಸೇವೆ ನಡೆಯಿತು.

ಎರಡು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಅಣಿಲೆ ತರವಾಡು ಕುಟುಂಬದ ಯಜಮಾನ ಅಣಿಲೆ ಕರ್ಪುಡಿಕಾನ ರಾಮಕೃಷ್ಣ ರೈ, ಅಣಿಲೆ ತರವಾಡು ಧರ್ಮ ದೈವ ಸೇವಾ ಸಮಿತಿ ಟ್ರಸ್ಟ್ನ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಕಾರ್ಯದರ್ಶಿ ರಾಜೀವಿ ರೈ, ಕೋಶಾಧಿಕಾರಿ ಶಶಿಧರ್ ರೈ ಅಣಿಲೆ, ಮಾಜಿ ಸೈನಿಕ ದೇರ್ಲ ಅಮ್ಮಣ್ಣ ರೈ , ಭಾರತಿ ರೈ, ಅಮೂಲ್ಯ ರೈ, ಪಿ.ಬಿ.ಅಮ್ಮಣ್ಣ ರೈ ಪಾಪೆಮಜಲು, ಸಚಿನ್ ರೈ ಪಾಪೆಮಜಲು, ಪದ್ಮನಾಭ ಆಳ್ವ ಅಣಿಲೆ, ಎ.ಕೆ.ತಿಮ್ಮಪ್ಪ ರೈ ಕೆಯ್ಯೂರು, ಸೋಮಶೇಖರ್ ರೈ, ನಾರಾಯಣ ರೈ, ಸುನೀತಾ ಸುರೇಶ್ ರೈ, ರವಿ ರೈ, ಸುಂದರ ರೈ, ಪ್ರೇಮ ರೈ, ಗೀತೇಶ್ ರೈ, ಶನ್ಮಿತ್ ರೈ, ವಿಶ್ವನಾಥ ರೈ, ಸಾವಿತ್ರಿ ರೈ, ಬಾಬು ರೈ, ಶ್ರೀಜನ್ ರೈ, ಭವ್ಯ ರೈ, ಹರಿನಾಥ ರೈ ಕುಡೇಲು, ಸುರೇಂದ್ರ ರೈ, ಸುಹಾಸಿನಿ ಆಳ್ವ ಪೆರ್ವತೋಡಿ, ಕಿರಣ್ ರೈ ಅಣಿಲೆ ಮತ್ತು ಅಣಿಲೆ ತರವಾಡು ಕುಟುಂಬದ ಸದಸ್ಯರುಗಳು, ಬಂಧುಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.