ಪುತ್ತೂರು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ನವೋದಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾದ ನವೋದಯ ಸಮವಸ್ತ್ರವನ್ನು ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಪೆರ್ನಾಜೆ ಯವರು ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ವಿತರಣೆ ಮಾಡಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರು ಧನಂಜಯ, ನಿರ್ದೇಶಕಿ ಜಯಂತಿ, ಚಂದ್ರಾವತಿ, ಜಗದೀಶ, ಹಾಗೂ ಕೆದಿಲ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೇಶವ ಗೌಡ ಕಾಂತುಕೊಡಿ ಹಾಗೂ ಕೆದಿಲ ವಲಯ ನವೋದಯ ಪ್ರೇರಕಿ ಮೋಹಿನಿ ಹಾಗೂ ಬಾಲ್ತಿಲ ವಲಯ ಪ್ರೇರಕಿ ಲಕ್ಷ್ಮಿ ಉಪಸ್ಥಿತರಿದ್ದರು.