ಪುತ್ತೂರು: ಬನ್ನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್‌ಡಿಎಂಸಿ ನೇತೃತ್ವದಲ್ಲಿ 2025ರ ಜೂನ್ ತಿಂಗಳಲ್ಲಿ ಪ್ರಾರಂಭಗೊಳ್ಳಲಿರುವ ಎಲ್‌ಕೆಜಿ, ಯುಕೆಜಿ ತರಗತಿಯು ಎ.8ರಂದು ಉದ್ಘಾಟನೆಗೊಂಡಿತು.
ನಗರ ಸಭಾ ಸದಸ್ಯೆ ಗೌರಿ ಬನ್ನೂರು ದಾಖಲಾಗುವ ವಿದ್ಯಾರ್ಥಿಗಳಿಗೆ ದಾಖಲಾತಿ ಪತ್ರದ ನಮೂನೆಯನ್ನು ನೀಡುವುದರ ಮೂಲಕ ಉದ್ಘಾಟಿಸಿದರು. ಎಸ್‌ಡಿ ಎಮ್‌ಸಿ ಅಧ್ಯಕ್ಷ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕರು ಹಾಗೂ ಎಮ್‌ಆರ್‌ಪಿಯಲ್‌ನ ಸಿಎಸ್‌ಆರ್ ವಿಭಾಗದ ನಿವೃತ್ತ ಅಧಿಕಾರಿಯಾಗಿರುವ ಸುಂದರ ಗೌಡ, ನಿವೃತ್ತ ಸೈನಿಕ ವಸಂತ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಸಾಲ್ಯಾನ್, ಹನೀಫ್ ಸಿಬಾರ್ ಪಾಂಡುರಂಗ ಬನ್ನೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಫಾಝ ಬನ್ನೂರು, ಉಪಾಧ್ಯಕ್ಷ ನವೀನ್ ರೈ, ಹೈದರ್ ಬನ್ನೂರು ಮಹಾಬಲ ಪೂಜಾರಿ ಬನ್ನೂರು, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ನಳಿನಾಕ್ಷಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಸುಹಾಸ್ ರೈ ಬನ್ನೂರು ಉಪಸ್ಥರಿದ್ದರು.
ಆಸನದ ಕೊಡುಗೆ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ನಲಿಕಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೇಕಾದ ಆಸನವನ್ನು ಕೊಡುಗೆಯಾಗಿ ನೀಡಿದರು. ಎಲ್‌ಕೆಜಿ, ಯುಕೆಜಿ ತರಗತಿಯ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೇಕಾದ ಆಸನದ ವ್ಯವಸ್ಥೆಯನ್ನು ಗೌರಿಬನ್ನೂರು, ಸುಂದರ ಗೌಡ ಮತ್ತು ಮಹಾಬಲ ಪೂಜಾರಿ ಇವರು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ಶಾಲಾ ಎಸ್‌ಡಿಎಂಸಿಯ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಉಸ್ಮಾನ್, ಗ್ರೇಟಾ ಮಸ್ಕ್ ರೇನಸ್ ಮತ್ತು ಅತಿಥಿ ಶಿಕ್ಷಕಿ ಸುಷ್ಮಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಬಾಕ್ಸ್
ಮುಂದಿನ ಶೈಕ್ಷಣಿಕ ವರ್ಷದಿಂದ ೪ ವರ್ಷ ಪೂರೈಸಿದ ವಿದ್ಯಾರ್ಥಿಗಳನ್ನು ಎಲ್‌ಕೆಜಿ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು. ಎಲ್‌ಕೆಜಿ ತರಗತಿಯಿಂದ ೭ನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿಗೆ ಅವಕಾಶ ಕಲ್ಪಿಸಲಾಗುವುದು. ಜನವಸತಿ ಪ್ರದೇಶದಲ್ಲಿ ಇರುವ ಎಲ್ಲಾ ಮಕ್ಕಳು ನಮ್ಮ ಶಾಲೆಗೆ ದಾಖಲಾಗುವಂತೆ ಎಲ್ಲಾ ಪೋಷಕರು ಕ್ರಮ ವಹಿಸಿ, ಸಹಕರಿಸಬೇಕು.
-ಶಿಕ್ಷಕ ಮಹಮ್ಮದ್ ಅಶ್ರಫ್, ಶಾಲಾ ಮುಖ್ಯಶಿಕ್ಷಕರು