ಪುತ್ತೂರು: ಕುಂಬ್ರದ ಡಿಂಬ್ರಿಯಲ್ಲಿರುವ ಅಲಿಫ್ ಝೀಕ್ಯೂ ಪ್ರಿ ಸ್ಕೂಲ್‌ನಲ್ಲಿ 2025-26ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ. 3-4 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿದ್ದು ಸ್ಕೂಲ್‌ನಲ್ಲಿ ಇಂಗ್ಲೀಷ್, ಕನ್ನಡ, ಅರೇಬಿಕ್, ಹಿಂದಿ ಭಾಷೆಗಳನ್ನು ಕಲಿಸಿಕೊಡಲಾಗುತ್ತಿದೆ. ಅಲ್ಲದೇ ಖುರಾನ್ ಪಠಣ ಮತ್ತು ಹಿಫ್ಲ್ ಕಲಿಕೆಯಿದ್ದು ಪುಟಾಣಿ ಸ್ನೇಹಿ ಕಲಿಕಾ ಪರಿಸರ, ಚಟುವಟಿಕೆ ಆಧಾರಿತ ಪ್ಲೇ-ವೇ ವಿಧಾನ, ನೈತಿಕ ತರಬೇತಿ ಮತ್ತು ಪೋಷಕರಿಗೆ ಮಾಸಿಕ ತರಬೇತಿ ನೀಡಲಾಗುತ್ತದೆ.
ಸಂಸ್ಥೆಯಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸೀಮಿತ ಸೀಟುಗಳು ಲಭ್ಯವಿದ್ದು ವಾಹನ ಸೌಲಭ್ಯವೂ ಇದೆ.
ಹೆಚ್ಚಿನ ಮಾಹಿತಿಗಾಗಿ 8105067228 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.