ನೆಲ್ಯಾಡಿ: ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಎ.8ರಂದು ನಡೆದ ಅಂತರ್ ಕಾಲೇಜು ಮಟ್ಟದ ’ಕೃತ್ವಾ’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇಲ್ಲಿನ ತೃತೀಯ ಬಿ.ಎ.ವಿದ್ಯಾರ್ಥಿ ಹರ್ಷಿತ್ ಮತ್ತು ಪ್ರಥಮ ಬಿ.ಕಾಂ. ವಿದ್ಯಾರ್ಥಿ ಜಿ.ವಿವೇಕ್ ಬೆಳ್ಯಪ್ಪ ಅವರು ಲಿಟರೇಚರ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಶ್ವವಿದ್ಯಾನಿಲಯದ ಕಾಲೇಜಿನ ಸಂಯೋಜಕರಾದ ಡಾ. ಸುರೇಶ್‌ರವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕಿ ಚಂದ್ರಕಲಾರವರ ಜವಾಬ್ದಾರಿಯಲ್ಲಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಗೌರವ ತಂದಿರುತ್ತಾರೆ. ಉಪನ್ಯಾಸಕ ಡಾ.ನೂರಂದಪ್ಪ ಅವರು ಸಾಹಿತ್ಯಿಕ ರಸಪ್ರಶ್ನೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.