ಕುಂತೂರುಪದವು ಪ್ರೌಢಶಾಲೆಗೆ ಗ್ರಾಮೀಣ ವಿಕಾಸ ಬ್ಯಾಂಕ್‌ನಿಂದ ಕಂಪ್ಯೂಟರ್ ಕೊಡುಗೆ

0

ಕಡಬ: ಸಂತಜಾರ್ಜ್ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆ ಕುಂತೂರುಪದವು ಇಲ್ಲಿಗೆ ಗ್ರಾಮೀಣ ವಿಕಾಸ ಬ್ಯಾಂಕ್ ಕಾಣಿಯೂರು ಶಾಖೆಯ ವತಿಯಿಂದ ತಾಂತ್ರಿಕ ಶಿಕ್ಷಣದ ಉತ್ತೇಜನಕ್ಕಾಗಿ 3 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಈ ಕಂಪ್ಯೂಟರ್‌ಗಳನ್ನು ಬ್ಯಾಂಕ್ ಮ್ಯಾನೇಜರ್ ಚೇತನ್‌ರವರು ಶಾಲೆಯ ಮುಖ್ಯಶಿಕ್ಷಕರಾದ ಹರಿಶ್ಚಂದ್ರ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ಕಿಶೋರ್ ಬಿ, ಇಂಗ್ಲಿಷ್ ಶಿಕ್ಷಕಿ ಸ್ಮಿತಾ ಡಿ, ದ್ವಿತೀಯ ದರ್ಜೆ ಸಹಾಯಕ ಸಿರಿಲ್ ಹಾಗೂ ಕಂಪ್ಯೂಟರ್‌ಗಳನ್ನು ತರಲು ಸಹಕರಿಸಿದ ಕಿರಣ್-ರೇಖಾ ದಂಪತಿ ಬೆಳ್ಳಾರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here