*ಮಕ್ಕಳ ಪ್ರತಿಭೆಯ ಅಭಿವ್ಯಕ್ತಿಗೆ ಈ ಶಿಬಿರ *ಸೂಕ್ತವೇದಿಕೆಯಾಗಿದೆ -ಶ್ರೀಮತಿ ಗೀತಾ
ಸಂಟ್ಯಾರು: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು (ರಿ)ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ),ಪುತ್ತೂರು ಇದರ ಸಹಯೋಗದಲ್ಲಿದಲ್ಲಿ ಸಂಟ್ಯಾರು ಸರಸ್ವತಿ ಪುರಂ ನಲ್ಲಿನ ಸರಸ್ವತಿ ಸದನದಲ್ಲಿ “ಅಭಿವ್ಯಕ್ತ-2025 ಮಕ್ಕಳ ಬೇಸಿಗೆ ಶಿಬಿರವು ನಡೆಯಿತು. ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್ಯಾಪು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಗೀತಾ ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಗೆ ವೇದಿಕೆಯಾಗಿದೆ ಎಂದರು. ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರಿನ ಅಧ್ಯಕ್ಷ ರಾಜಗೋಪಾಲ್ ಬಾಳೆಗುಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ದೇವಿಪ್ರಸಾದ್ ಕಲ್ಲಾಜೆ, ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ, ಆರ್ಯಾಪು ಗ್ರಾಮ ಪಂಚಾಯತ್ ಹರೀಶ್ ನಾಯಕ್ ಸಂಟ್ಯಾರು, ಯತೀಶ್ ದೇವ ಸಂಟ್ಯಾರು, ಪವಿತ್ರ ರೈ ತೊಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂದರ್ಭೊಚಿತವಾಗಿ ಮಾತನಾಡಿ ಶುಭಹಾರೈಸಿದರು. ಶಿಬಿರ ಸಂಯೋಜಕ ಗಣೇಶ ನಾಯಕ್ ನೆಕ್ಕರೆ ಪ್ರಾಸ್ಥಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು ಇದರ ನಿರ್ದೇಶಕಿ ದೇವಕಿ ಸಂಟ್ಯಾರು ಧನ್ಯವಾದಗೈದರು. ಶಿಬಿರ ಸಂಯೋಜಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕ ಗಣೇಶ ನಾಯಕ್ ನೆಕ್ಕರೆ ಮಕ್ಕಳನ್ನು ತರಬೇತಿಗೆ ಸಿದ್ದಗೊಳಿಸಿ ತರಬೇತಿಯ ರೂಪುರೇಷೆಯನ್ನು ವಿವರಿಸಿದರು. ಬಳಿಕ ಉಪನ್ಯಾಸಕಿ ಮಂಗಳೂರಿನ ವಿಧುಷಿ ಅಧಿತಿ ಮಂಗಳೂರು ʼನವರಸದೊಂದಿಗೆ ಅಭಿನಯʼ ಎಂಬ ವಿಚಾರದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನಡೆಸಿಕೊಟ್ಟರು .
ಜಯಶ್ರೀ ಮಿತ್ತೂರು ಮತ್ತು ಪೂರ್ಣಿಮಾ ಕ್ರಾಪ್ಟ್, ಅಭಿನಯ ಗೀತೆ ಹೇಳಿ ಮಕ್ಕಳನ್ನು ರಂಜಿಸಿದರು. ಅಪರಾಹ್ನ ದ ಬಳಿಕ ಸುರರಾಜ್ ಚಿಕ್ಕಮಗಳೂರು ಮತ್ತು ರಾಜೇಶ್ವರಿ ʼಕಸದಿಂದ ರಸʼ ಕ್ರಾಪ್ಟ್ ತರಬೇತಿ ನಡೆಸಿಕೊಟ್ಟರು. ಅಪರಾಹ್ನ 2.30ಯ ಬಳಿಕ ಆಟ-ರಂಗಾಟ ವನ್ನು ಸಂಪನ್ಮೂಲ ವ್ಯಕ್ತಿಗಳಾದ ಭವ್ಯ ಮರಿಕೆ ಮತ್ತು ಯಶೋಧ ಮರಿಕೆ ನಡೆಸಿದರು. ಸುಮಾರು 100ಕ್ಕೂ ಅಧಿಕ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.