ಪುತ್ತೂರು: ಶಂಸುಲ್ ಉಲಮಾ ಎಜುಕೇಶನ್ ಸೆಂಟರ್ ತಿಂಗಳಾಡಿ ಇದರ ಆಶ್ರಯದಲ್ಲಿ ನೂತನ ಮದ್ರ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಏಕದಿನ ಧಾರ್ಮಿಕ ಪ್ರಭಾಷಣ ಎ.13 ಮತ್ತು ಎ.14ರಂದು ತಿಂಗಳಾಡಿ ಜಿಸ್ತಿಯಾ ನಗರದಲ್ಲಿ ನಡೆಯಲಿದೆ.
ಎ.13ರಂದು ಸಂಜೆ ಗಂಟೆ 5ಕ್ಕೆ ಮದ್ರಸ ಕಟ್ಟಡದ ಉದ್ಘಾಟನೆ ನಡೆಯಲಿದ್ದು ಕ್ಯಾಲಿಕಟ್ ಗ್ರ್ಯಾಂಡ್ ಖಾಝಿ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಉದ್ಘಾಟಿಸಲಿದ್ದಾರೆ. ಜಿಸ್ತಿಯಾ ಮದ್ರಸದ ಗೌರವಾಧ್ಯಕ್ಷರಾದ ಹಾಜಿ ಮುಹಮ್ಮದ್ ಸಂತೋಷ್ ಅಧ್ಯಕ್ಷತೆ ವಹಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ತಿಂಗಳಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಅಧ್ಯಕ್ಷತೆ ವಹಿಸಲಿದ್ದು, ಆರ್.ಐ.ಸಿ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಉದ್ಯಮಿಗಳಾದ ಲತೀಫ್ ಗುರುಪುರ, ಮುಹಮ್ಮದ್ ಕೆ.ಎಚ್, ಇಕ್ಬಾಲ್ ಕೋಲ್ಪೆ, ಮುಹಮ್ಮದ್ ಹಾಜಿ ಒಮೇಗ, ಸನದ್ ಯೂಸುಫ್ ಪುತ್ತೂರು, ನಝೀರ್ ಕೊಯಿಲ, ಯೂಸುಫ್ ಗೌಸಿಯಾ ಸಾಜ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎ.14ರಂದು ರಾತ್ರಿ ಗಂಟೆ 8ರಿಂದ ಧಾರ್ಮಿಕ ಮತ ಪ್ರಭಾಷಣ ನಡೆಯಲಿದ್ದು ಕೂಡುರಸ್ತೆ ಖತೀಬ್ ಬದ್ರುದ್ದೀನ್ ರಹ್ಮಾನಿ ಉದ್ಘಾಟಿಸಲಿದ್ದಾರೆ. ಜಿಸ್ತಿಯಾ ಮದ್ರಸದ ಉಪಾಧ್ಯಕ್ಷ ಮುಹಮ್ಮದ್ ಕುಂಞಿ ಪಟ್ಟೆ ಅಧ್ಯಕ್ಷತೆ ವಹಿಸಲಿದ್ದು ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಮುಹಮ್ಮದ್ ಹನೀಫ್ ನಿಝಾಮಿ ಅಲ್ ಮುರ್ಷಿದಿ ಮೊಗ್ರಾಲ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.