ಮಹಿಳಾ ಪ್ರಧಾನ ಕಥೆಯಾಧಾರಿತ ತುಳು ಚಿತ್ರ ‘ಮೀರಾ’ ನಾಳೆ ಬೆಳ್ಳಿತೆರೆಗೆ

0

ಪುತ್ತೂರು: ಮಹಿಳಾ ಪ್ರಧಾನ ಕಥೆಯಾಧಾರಿತವಾಗಿ ನಿರ್ಮಾಣಗೊಂಡಿರುವ ತುಳು ಚಿತ್ರ ರಂಗದ ಬಹು ನಿರೀಕ್ಷಿತ ‘ಮೀರಾ’ ಚಿತ್ರವು ಎ.11ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಲಂಚುಲಾಲ್ ಕೆ.ಎಸ್ ಹೇಳಿದರು.


ಎ.10ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಚಿತ್ರವೆಂದರೆ ಕೇವಲ ಕಾಮಿಡಿ ಎನ್ನುವ ಮನಸ್ಥಿತಿ ಜನರಲ್ಲಿದೆ. ಆದರೆ ಮೀರಾ ಚಿತ್ರವು ಜನರಿಗೆ ಹೊಸ ಅನುಭವನ್ನು ನೀಡಲಿದೆ. ಈ ಚಿತ್ರದಲ್ಲಿ ಬದಲಾವಣೆ ತರುವ ಪ್ರಯತ್ನವಾಗಿದೆ. ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ಮಹಿಳಾ ಜೀವನ ಸಾಧಕಿಯ ಕಥೆ ಆಧರಿಸಿದೆ. ಮಂಗಳೂರಿನಲ್ಲಿ ಈಗಾಗಲೇ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಚಿತ್ರ ಪ್ರೇಕ್ಷಕರಿಂದ ಚಿತ್ರದ ಪರವಾಗಿ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಪುಷ್ಪ 2 ಚಿತ್ರದಲ್ಲಿ ಅಸಿಸ್ಟೆಂಟ್ ಕ್ಯಾಮಾರಾಮ್ಯಾನ್ ಆಗಿದ್ದ ಅಜಯ್ ಈ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸಿನಿಮಾಗಳಿಗೆ ಕಲರಿಂಗ್ ಮಾಡುವ ರಿಜು ಈ ಸಿನಿಮಾದಲ್ಲಿ ಸಿನಿಮಾ ದೃಶ್ಯಗಳ ಕಲರಿಂಗ್‌ನ್ನು ಮಾಡಿದ್ದಾರೆ. ಕೇರಳ, ಮಂಗಳೂರು, ಉಡುಪಿಗಳಲ್ಲಿ ಚಿತ್ರೀಕರಣಗೊಂಡಿದೆ. ಒಟ್ಟು ನಾಲ್ಕು ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದು ಒಂದು ಚಿತ್ರ ಬಿಡುಗಡೆಗೊಳ್ಳುವ ಜೊತೆಗೆ ಇನ್ನೂ ಮೂರು ಚಿತ್ರ ನಿರ್ಮಾಣವಾಗುತ್ತಿದೆ. ರಂಗದಲ್ಲಿ ಹಂತ ಹಂತವಾಗಿ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಿರ್ದೇಶಕ ಅಶ್ವಥ್ ಮಾತನಾಡಿ, ಮೀರಾ ಚಿತ್ರ ಪ್ರಿಮಿಯರ್ ಶೊ ನಡೆದಿದ್ದು ಉತ್ತಮ ಪ್ರಶಂಸೆ ದೊರೆತಿದೆ. ತುಳು ಚಿತ್ರರಂಗದಲ್ಲಿ ಹೊಸತನದಲ್ಲಿ ಉತ್ತಮ ಚಿತ್ರ ನೀಡುವ ಪ್ರಯತ್ನ ಮಾಡಿದ್ದೇವೆ. ಈ ಚಿತ್ರ ಮೂಲಕ ತುಳು ಚಿತ್ರ ರಂಗದಲ್ಲಿ ಬದಲಾವಣೆಯನ್ನು ತರುವ ಪ್ರಯತ್ನವಾಗಿದೆ. ಪ್ರಥಮ ಬಾರಿಗೆ ಎಐ ಹಾಡುನ್ನು ತರಲಾಗಿದೆ. ರೇಜ್ನು ಜಯಪ್ರಕಾಶ್ ಸಂಗೀತ ನೀಡಿದ್ದಾರೆ. ಕೇರಳದಲ್ಲಿ ಪ್ರಥಮವಾಗಿ ಶಾರ್ಟ್ ಮೂವಿ ಮಾಡಿದ್ದು ಅದರ ಮುಂದುವರಿದ ಭಾಗವಾಗಿ ಮೀರಾ ಚಿತ್ರ ನಿರ್ಮಾಣಗೊಂಡಿದೆ ಎಂದರು.


ನಟ ಯತೀಶ್ ಪೂಜಾರಿ ಮಾತನಾಡಿ, ಮೀರಾ ಚಿತ್ರದಲ್ಲಿ ಖ್ಯಾತ ಗಾಯಕರಾದ ಮಧು ಬಾಲಕೃಷ್ಣನ್ ಈ ಚಿತ್ರಕ್ಕೆ ಸ್ವರ ನೀಡಿದ್ದಾರೆ. ಅಲ್ಲದೆ ಕನ್ನಡ ರಾಪ್ ಗಾಯಕ ಆಲ್ ಒಕೆ ಈ ಸಿನಿಮಾದಲ್ಲಿ ಹಾಡುವ ಮೂಲಕ ಪ್ರಥಮ ಬಾರಿಗೆ ತುಳು ಚಿತ್ರದಲ್ಲಿ ಗಾಯಕರಾಗಿರುವು ಈ ಚಿತ್ರ ಮತ್ತೋದು ವಿಶೇಷತೆಯಾಗಿದೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಎಐ ನಿಂದ ನಿರ್ಮಿತ ಹಾಡನ್ನೂ ಜೋಡಿಸಲಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ರೇಜ್ನು ಜಯಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಇಶಿಕಾ ಶೆಟ್ಟಿ ನಟಿಸಿದ್ದಾರೆ. ಅರವಿಂದ ಬೋಳಾರ್, ಜೆ.ಪಿ ತೂಮಿನಾಡು, ದೀಪಕ್ ರೈ ಪಾಣಾಜೆ, ಲಕ್ಷ್ಯಾ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ ಎಂದ ಹೇಳಿದರು.
ಚಲನ ಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಂಡವಾಗಿ ಅತೀ ಹೆಚ್ಚು ಮಂದಿ ವೀಕ್ಷಣೆ ಮಾಡುವವರಿಗೆ ನಗದು ಬಹುಮಾನ:
ಹೊಸತನವಿರುವ ಈ ಚಲನ ಚಿತ್ರವನ್ನು ತಂಡವಾಗಿ ವೀಕ್ಷಣೆ ಮಾಡಬೇಕು. ಚಿತ್ರ ಬಿಡುಗಡೆಗೊಂಡ ಪ್ರಥಮ ವಾರ ಅತೀ ಹೆಚ್ಚು ಟಿಕೆಟ್ ಖರೀದಿಸುವವರಿಗೆ ನಗದು ಬಹುಮಾನ ನೀಡಲಾಗುವುದು. ರೂ.20,000, ರೂ.30,೦೦೦ ಹಾಗೂ ರೂ.50,೦೦೦ ಎಂದು 3 ಭಾಗಗಳಾಗಿ ಮಾಡಿದ್ದು ಒಟ್ಟು ರೂ.1 ಲಕ್ಷದ ನಗದು ಬಹುಮಾನ ನೀಡಲಾಗವುದು. ಎ.11ರಂದು ಚಿತ್ರ ಬಿಡುಗಡೆಗೊಂಡ ದಿನದಿಂದ ಎ.18ರ ತನಕ ಈ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಗ್ರೂಪ್ ಆಗಿ ಬಂದು ಅತೀ ಹೆಚ್ಚು ವೀಕ್ಷಣೆ ಮಾಡುವವರನ್ನು ಆಯ್ಕೆ ಮಾಡಲಾಗುವುದು. ಎ.19ರಂದು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

LEAVE A REPLY

Please enter your comment!
Please enter your name here