ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿ ಕಾನೂನಿಗೆ ಧಕ್ಕೆಯನ್ನುಂಟು ಮಾಡಿದ ಆರೋಪದ ಹಿನ್ನಲೆ ಇಬ್ಬರು ಯುವಕರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈರ್ವರಿಗೂ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಪುತ್ತೂರು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ವಿರುದ್ದ ಏ.9 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ ನಂ: 42/2025 ಕಲಂ : 25(1B)(B) Arms Act 1959 & ಕಲಂ 270,3(5) ಬಿಎನ್‌ಎಸ್ 2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈಗ ಇಬ್ಬರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.ಆರೋಪಿಗಳ ಪರ ವಕೀಲರಾದ ಮಾದವ ಪೂಜಾರಿ ವಾದಿಸಿದರು.