ಪುತ್ತೂರು:2 ತಿಂಗಳ ಹಿಂದೆ ಪುತ್ತೂರು ದರ್ಬೆಯಿಂದ ಕಳವಾಗಿದ್ದ ಬೈಕ್‌ನ್ನು ಪೊಲೀಸರು ಪತ್ತೆ ಮಾಡಿದ್ದು,ಆರೋಪಿಯನ್ನು ಬಂಧಿಸಿದ್ದಾರೆ.
ದರ್ಬೆ ಬಳಿ ರತನ್ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಓಡಾಡಲೆಂದು ಅಂಗಡಿ ಮುಂದೆ ಇರಿಸಿದ್ದ ಬೈಕ್ ಫೆ.7ರಂದು ಕಳವಾಗಿತ್ತು.ಈ ಕುರಿತು ಸಂಸ್ಥೆಯ ಮಾಲಕ ರತನ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು,ಕಳವಾದ ಬೈಕ್ ಹಾಸನದಲ್ಲಿರುವುದನ್ನು ಪತ್ತೆ ಮಾಡಿದ್ದಾರೆ.ಕಳವು ಮಾಡಿದ ಆರೋಪಿ ಹಾಸನದ ಆಲೂರು ನಿವಾಸಿ ಗಗನ್(36ವ)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.